ನವದೆಹಲಿ: ಅಮೆರಿಕಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಗಳು ಅಲ್ಲಿನ ಹಿಂದೂ ಸಮುದಾಯವನ್ನು ಆತಂಕದಲ್ಲಿ ಬದುಕುವಂತೆ ಮಾಡಿದೆ, ಇದಕ್ಕೆ ಮತ್ತಷ್ಟು ಉತ್ತೇಜನ ನೀಡಲು ಎಂಬಂತೆ ಸುದ್ದಿ ಮಾಧ್ಯಮವೊಂದು ಹಿಂದೂ ಧರ್ಮವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಚಿತ್ರಿಸಿ ಭಾರೀ ವಿವಾದಕ್ಕೊಳಗಾಗಿದೆ.
ಸಿಎನ್ಎನ್ ಚಾನೆಲ್ ‘ಬಿಲಿವರ್’ ಎಂಬ ಟೈಟಲ್ನ್ನೊಳಗೊಂಡ 6 ಸರಣಿಯ ಸ್ಪಿರಿಚ್ಯುಲ್ ಅಡ್ವೆನ್ಚರ್ನ್ನು ಪ್ರಸಾರ ಮಾಡಿದ್ದು, ಇದರಲ್ಲಿ ಹಿಂದೂ ಧರ್ಮದ ನಂಬಿಕೆ ಆರಚಣೆಗಳನ್ನು ಅತ್ಯಂತ ಹೀನಾಯವಾಗಿ ತೋರಿಸಲಾಗಿದೆ. ರೆಝ ಅಸ್ಲಾನ್ ಎಂಬುವವರು ವೀಡಿಯೋ ಮಾಡಿದ್ದಾರೆ.
ಈ ಸರಣಿಯ ಮೊದಲ ಸಂಚಿಕೆಯಲ್ಲಿ ವಾರಣಾಸಿಯಲ್ಲಿನ ಅಘೋರಿಗಳ ಬಗ್ಗೆ ತೋರಿಸಲಾಗಿದೆ. ಇವರನ್ನು ಅತ್ಯಂತ ಹೀನವಾಗಿ ಬಿಂಬಿಸಲಾಗಿದೆ. ಇವರನ್ನೇ ಮುಂದಿಟ್ಟುಕೊಂಡು ಸಮಸ್ತ ಹಿಂದೂ ಸಮುದಾಯವನ್ನು ನರಭಕ್ಷಕರು ಎಂಬಂತೆ ಇದರಲ್ಲಿ ಚಿತ್ರಿಸಲಾಗಿದೆ.
ಎಲ್ಲಾ ರೀತಿಯ ಆಚರಣೆ, ನಂಬಿಕೆಗಳಿಗೆ ಅವಕಾಶವಿರುವ ಹಿಂದೂಧರ್ಮವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಕೆಟ್ಟದಾಗಿ ಬಿಂಬಿಸುತ್ತಲೇ ಬಂದಿವೆ. ಇದು ಹಿಂದೂಗಳನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.
ಬಿಲಿವರ್ ಎಪಿಸೋಡ್ ಮೂಲಕ ಹಿಂದೂಗಳನ್ನು ನರಭಕ್ಷಕರು ಎಂಬಂತೆ ಚಿತ್ರಿಸುವ ಮೂಲಕ ಅಸ್ಲಾನ್ ಅವರು ಅಮೆರಿಕಾದಲ್ಲಿ ನಡೆಯುತ್ತಿರುವ ಭಾರತೀಯರ ವಿರುದ್ಧದ ಜನಾಂಗೀಯ ದಾಳಿಗೆ ಮತ್ತಷ್ಟು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕಾಗಿ ಅಲ್ಲಿನ ಹಿಂದೂಗಳು, ‘ಹಿಂದೂಧರ್ಮದ ವಿರುದ್ಧ ರೆಝ ಅಸ್ಲಾನ್ ಅವರು ಮಾಡುತ್ತಿರುವ ದ್ವೇಷದ ಶೋಗಳನ್ನು ನಿಲ್ಲಿಸಿ’ ಎಂದು ಆಗ್ರಹಿಸಿ ಪಿಟಿಷನ್ ಆರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.