ನವದೆಹಲಿ: ಮಾರುಕಟ್ಟೆ ಪರಿಕಲ್ಪನೆಯ ವಿರುದ್ಧವಾಗಿ ಭಾರತದ ನಿರುದ್ಯೋಗ ಸಮಸ್ಯೆಯಲ್ಲಿ ಕುಸಿತ ಕಂಡಿದ್ದು, ಫೆಬ್ರವರಿ ತಿಂಗಳಲ್ಲಿ ನಿರುದ್ಯೋಗ ದರ 9.5%ರಿಂದ 4.8% ಗೆ ಕುಸಿದಿದೆ.
ಎಸ್ಬಿಐ ಇಕೋಫ್ಲ್ಯಾಷ್ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಆಧಕ ಮಟ್ಟದಲ್ಲಿ ಕಡಿಮೆಯಾಗಿದ್ದು, ಆಗಸ್ಟ್ 2016ರಿಂದ ಫೆಬ್ರವರಿ 2017ರ ವರೆಗೆ ಉತ್ತರಪ್ರದೇಶದಲ್ಲಿ ನಿರುದ್ಯೋಗ ದರ ಶೇ.17.೧ರಿಂದ 2.9ಕ್ಕೆ ಇಳಿದಿದೆ.
ಮಧ್ಯಪ್ರದೇಶದಲ್ಲಿ ನಿರುದ್ಯೋಗ ದರ ಶೇ.10ರಿಂದ ಶೇ. 2.7ಕ್ಕೆ ಇಳಿಕೆಯಾದರೆ, ಜಾರ್ಖಂಡ್ನಲ್ಲಿ ಶೇ.9.5ರಿಂದ ಶೇ. 3.1, ಒಡಿಸಾದಲ್ಲಿ ಶೇ. 10.2ರಿಂದ ಶೇ. 2.9, ಹಾಗೂ ಬಿಹಾರದಲ್ಲಿ ಶೇ.13ರಿಂದ ಶೇ.3.1೧ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಹೊಸ ಉದ್ಯೋಗವನ್ನು ಕಲ್ಪಿಸುವ ಕೇಂದ್ರ ಸರ್ಕಾರದ ಪ್ರಯತ್ನದಿಂದಾಗಿ ನಿರುದ್ಯೋಗ ಸಮಸ್ಯೆಯಲ್ಲಿ ಕುಸಿತ ಕಂಡಿದೆ ಎಂದು ಅಂದಾಜಿಸಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಸಂಶೋಧನಾ ತಂಡದ ಮುಖ್ಯ ಸಲಹೆಗಾರ ಸೌಮ್ಯ ಕಾಮತಿ ಘೋಷ್ ಹೇಳಿದ್ದಾರೆ.
ಇದಲ್ಲದೇ ಉದ್ತೋಗ ಖಾತ್ರಿ ಯೋಜನೆ (MGNREGA ) ಅಡಿಯಲ್ಲಿ 2016-17ರಲ್ಲಿ ಪೂರ್ಣಗೊಂಡ ಕಾಮಗಾರಿ 2015-16ರ ಶೇ.36.0ಕ್ಕೆ ಹೋಲಿಸಿದರೆ ಹೆಚ್ಚುವರಿ ಶೇ.40ರಂತೆ 50.5 ಲಕ್ಷ ಆಗಿದೆ. ಅಂಗನವಾಡಿ, ಬರಪೀಡಿತ ಪ್ರದೇಶಗಳ ಪ್ರೂಫಿಂಗ್, ಗ್ರಾಮೀಣ ಕುಡಿಯುವ ನೀರಿನ ಯೋಜನೆ, ನೀರು ಸಂರಕ್ಷಣೆ ಮತ್ತು ಕೊಯ್ಲು ಕಾಮಗಾರಿಯಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.