ಅಮೃತಸರ್: ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಭಾನುವಾರ ಭಾರತ-ಪಾಕ್ನ ಅತ್ತಾರಿ-ವಾಘಾ ಗಡಿಯಲ್ಲಿ ಹಾರಿಸಲಾಯಿತು. ಈ ಧ್ವಜವುಸ್ಥಂಭವು ಸುಮಾರು 360 ಅಡಿ ಎತ್ತರ, ಧ್ವಜವು ಸುಮಾರು 120 ಅಡಿ ಉದ್ದ, 80 ಅಡಿ ಅಗಲವಾಗಿದೆ ಹಾಗೂ 55 ಟನ್ಗಳಷ್ಟು ತೂಕ ಹೊಂದಿದೆ. ಭಾರತದ ಈ ಧ್ವಜವನ್ನು ಪಾಕಿಸ್ಥಾನದ ಲಾಹೋರ್ನಿಂದ ಸುಲಭವಾಗಿ ನೋಡಬಹುದು. ರಾಂಚಿಯಲ್ಲಿ 293 ಅಡಿ ಎತ್ತರದ ಭಾರತ ಧ್ವಜವನ್ನು ಹಾರಿಸಲಾಗಿದೆ.
ಈ ಯೋಜನೆಯು ಪಂಜಾಬ್ನ ಅಮೃತಸರ್ ಅಭಿವೃದ್ಧಿ ಸಂಸ್ಥೆ ಪ್ರಾಧಿಕಾರದಡಿಯಲ್ಲಿ ಸುಮಾರು 3.50 ಕೋಟಿ ರೂ. ಬಜೆಟ್ನಲ್ಲಿ ತಯಾರಾಗಿದೆ. ಪಂಜಾಬ್ನ ಸ್ಥಳೀಯ ಸಂಸ್ಥೆ, ವೈದ್ಯಕೀಯ ಮತ್ತು ಸಂಶೋಧನಾ ಇಲಾಖೆ ಸಚಿವರಾದ ಅನಿಲ್ ಜೋಷಿ ಭಾರತದ ಅತಿ ಎತ್ತರದ ಧ್ವಜವನ್ನು ಉದ್ಘಾಟನೆ ಮಾಡಿದರು. ಇದರ ನಿರ್ವಹಣೆಯ ಕಾರ್ಯವನ್ನು 3 ವರ್ಷಗಳ ಕಾಲ ಖಾಸಗಿ ಸಂಸ್ಥೆಯೊಂದು ಪಡೆದುಕೊಂಡಿದೆ ಎಂದು ಸಚಿವ ಅನಿಲ್ ಜೋಷಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜನವರಿ 26 ರಂದು ಈ ಮೊದಲು ಧ್ವಜವನ್ನು ಹಾರಿಸಬೇಕೆಂದು ಯೋಜಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.