ನವದೆಹಲಿ: ಇಂಟರ್ನೆಟ್ ಬಳಕೆ ಮಾಡುವ ಮಹಿಳೆಯರು ದೈಹಿಕ ಹಿಂಸೆ ಎದುರಿಸಿದಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಹಿಂಸಾತ್ಮಕ, ಪ್ರಚೋದನಕಾರಿ ಪೋಸ್ಟ್ (ಟ್ರೋಲ್) ಮಾಡಿದಲ್ಲಿ ಅವರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ‘I am Trolled’ ಆ್ಯಪ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
ಮಹಿಳೆಯರ ವಿರುದ್ಧದ ಬೆದರಿಕೆಗಳು ಮತ್ತು ಟ್ರೋಲ್ಗಳನ್ನು ಎದುರಿಸಲು ಈ ಆ್ಯಪ್ ಬಿಡುಗಡೆ ಮಾಡಲಾಗುವುದು. ಸಾಮಾಜಿಕ ತಾಣಗಳಲ್ಲಿ ಮಹಿಳೆಯರು ಪುರುಷರಂತೆ ನಿಂದನೆಗೆ ಒಳಗಾಗುತ್ತಿರುವುದು ದುರದೃಷ್ಟಕರ ಎಂದು ದೆಹಲಿಯಲ್ಲಿ ಎಫ್ಐಸಿಸಿಐ ಆಯೋಜಿಸಿದ್ದ ‘ವೆಲ್ನೆಸ್ ರೂಲ್ಸ್-ಪ್ರೋಆಕ್ಟಿವ್ ವೆಲ್ ಬೀಯಿಂಗ್’ ಕಾರ್ಯಕ್ರಮದಲ್ಲಿ ಮೇನಕಾ ಗಾಂಧಿ ಹೇಳಿದ್ದಾರೆ.
ಮೊಬೈಲ್ ಕಂಪೆನಿಗಳು ಪ್ಯಾನಿಕ್ ಬಟನ್ ಅಳವಡಿಕೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಪ್ಯಾನಿಕ್ ಬಟನ್ ವೈಶಿಷ್ಟ್ಯದ ‘ಶೌಟಿಂಗ್ ಆ್ಯಪ್’ ಮಾರ್ಚ್ ಅಂತ್ಯದೊಳಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ 600 ಒನ್-ಸ್ಟಾಪ್ ಸಹಾಯ ಕೇಂದ್ರ ‘ಸಖಿ’ ಸ್ಥಾಪಿಸಲಾಗುತ್ತಿದ್ದು, ಮಹಿಳೆಯರು ದೌರ್ಜನ್ಯ, ಆರೋಗ್ಯ, ಕಾನೂನು ಸಮಸ್ಯೆಗಳ ಸಹಾಯ ಪಡೆಯಬಹದು ಎಂದು ಮೇನಕಾ ಗಾಂಧಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.