ನವದೆಹಲಿ: ಪತಂಜಲಿ ಉತ್ಪನ್ನಗಳ ಮೂಲಕ ಬಾಬಾ ರಾಮ್ದೇವ್ ಅವರು 4,500 ವರ್ಷಗಳಷ್ಟು ಹಳೆಯ ಭಾರತೀಯ ಔಷಧ ವ್ಯವಸ್ಥೆಯನ್ನು ಪುನಃ ಸ್ಥಾಪಿಸಿದ್ದು, ಇದೀಗ ಡಾಬರ್ ಮತ್ತು ಹಮ್ದರ್ದ್ ಕಂಪೆನಿಗಳು ಗ್ರಾಹಕರಿಗಾಗಿ ಗಿಡಮೂಲಿಕೆಗಳ ಆಯುರ್ವೇದ ಉತ್ಪನ್ನಗಳನ್ನು ತಯಾರಿಸಲು ಮುಂದಾಗಿವೆ.
ಟೀಸ್ಟಿಕ್ ಮತ್ತು ಸ್ಯಾಷೆಗಳಲ್ಲಿ ದೊರೆಯುವ ಕೆಮ್ಮು ಮತ್ತು ನೆಗಡಿ ಪರಿಹಾರದ ಕಾಢ (ಕಷಾಯ), ಡಾಬರ್ ರೆಡ್ ಜೆಲ್ ಟೂತ್ಪೇಸ್ಟ್, ರೂಹ್ ಆಫ್ಜಾ ಸಿದ್ಧ ಪಾನೀಯ, ಮಿಶ್ರ ಹಣ್ಣುಗಳ ಕೆಮ್ಮಿನ ಸಿರಪ್, ಮತ್ತಿತರ ಉತ್ಪನ್ನಗಳೊಂದಿಗೆ ನೈಸರ್ಗಿಕ ಔಷಧಿ ಮಾರುಕಟ್ಟೆಗೆ ಹಲವು ಬದಲಾವಣೆಗಳೊಂದಿಗೆ ಸಮಕಾಲೀನ ಉತ್ಪನ್ನಗಳ ಉತ್ಪಾದನೆಗೆ ಸಿದ್ಧವಾಗಿವೆ.
ಭಾರತ ಯುವ ದೇಶ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಸಾಂಪ್ರದಾಯಿಕ ಕಂಪೆನಿಗಳು ಯುವಕರನ್ನು ತಲುಪಲು ಆಧುನೀಕರಣಗೊಳ್ಳಬೇಕು. ನಾವು ಈಗಾಗಲೇ ಈ ಕಾರ್ಯ ಆರಂಭಿಸಿದ್ದು, ಡಾಬರ್ ಚ್ಯವನಪ್ರಶ್ ಮಾವು ಮತ್ತು ಚಾಕಲೇಟ್ ಫ್ಲೇವರ್ಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಜೇನುತುಪಪ್ ಕೂಡ ಹಲವು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಇತರ ಉತ್ಪನ್ನಗಳೂ ಬರಲಿವೆ ಎಂದು ಡಾಬರ್ ಇಂಡಿಯಾ ಗ್ರಾಹಕ ರಕ್ಷಣಾ ವ್ಯವಹಾರದ ಇಡಿ ಕೆ.ಕೆ. ಚುಟಾಣಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.