ನವದೆಹಲಿ: ಭಾರತೀಯ ರೈಲ್ವೆ ದೆಹಲಿ-ಹೌರಾ ಮತ್ತು ದೆಹಲಿ-ಮುಂಬಯಿ ಕಾರಿಡಾರ್ಗಳ ನಡುವೆ 160 ಕಿ.ಮಿ. ವೇಗದಲ್ಲಿ ರೈಲು ಸಂಚಾರದ ಗುರಿಯೊಂದಿಗೆ ಮಹತ್ವಾಕಾಂಕ್ಷಿ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಅಂತಿಮಗೊಳಿಸಿದೆ.
ಭಾರತೀಯ ರೈಲ್ವೆ ಆರಂಭಿಸಿರುವ ‘ಮಿಶನ್ ರಫ್ತಾರ್’ ಯೋಜನೆ ಭಾಗವಾಗಿ 160 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸಲು ದೆಹಲಿ-ಹೌರಾ ಮತ್ತು ದೆಹಲಿ-ಮುಂಬಯಿ ಕಾರಿಡಾರ್ಗಳನ್ನು ಅಪ್ಗ್ರೇಡ್ ಮಾಡಲಿದೆ.
ಮಿಶನ್ ರಫ್ತಾರ್ ರೈಲುಗಳ ಪ್ರಯಾಣ ಸಮಯವನ್ನು ಕಡಿತಗೊಳಿಸುವ ಗುರಿ ಹೊಂದಿದೆ.
ಡಿಪಿಆರ್ ಪ್ರಕಾರ ಕಾನ್ಪುರ-ಲಖ್ನೌ ವಲಯ ಸೇರಿದಂತೆ ದೆಹಲಿ-ಹೌರಾ ಕಾರಿಡಾರ್ ಅಭಿವೃದ್ಧಿಗೆ 6,974 ಕೋಟಿ ರೂ. ಹಾಗೂ ಬರೋಡಾ-ಅಹ್ಮದಾಬಾದ್ ವಲಯ ಸೇರಿದಂತೆ ದೆಹಲಿ-ಮುಂಬಯಿ ಕಾರಿಡಾರ್ ಅಭಿವೃದ್ಧಿಗೆ 11,189 ಕೋಟಿ ರೂ. ವೆಚ್ಚ ತಗಲುವ ಬಗ್ಗೆ ಅಂದಾಜಿಸಿದೆ.
ಹೈ-ಸ್ಪೀಡ್ ರೈಲು ಮಾರ್ಗದ ಅಭಿವೃದ್ಧಿ ಕಾಮಗಾರಿ ಸಿವಿಲ್, ವಿದ್ಯುತ್, ಸಿಗ್ನಲ್ ಮತ್ತು ಟೆಲಿಕಾಂ ಕ್ಷೇತ್ರವನ್ನು ಒಲಗೊಂಡಿದೆ. ಇದು ದೆಹಲಿ-ಹೌರಾ ಹಾಗೂ ದೆಹಲಿ-ಮುಂಬಯಿ ಮಾರ್ಗಗಳ ಫೆನ್ಸಿಂಗ್ ಕಾಮಗಾರಿಯನ್ನೂ ಒಳಗೊಂಡಿದೆ ಎಂದು ಡಿಪಿಆರ್ ಮಾಹಿತಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.