ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ನಗರದ ಬಡ ಕುಟುಂಬಗಳಿಗೆ 5,590 ಕೋಟಿ ರೂ. ಹೂಡಿಕೆ ಮತ್ತು ಕೇಂದ್ರ ಸರ್ಕಾರದ 1,188 ಕೋಟಿ ರೂ. ನೆರವಿನೊಂದಿಗೆ 90,095 ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ ಅನುಮೋದನೆ ನೀಡಿದೆ.
ಮಧ್ಯಪ್ರದೇಶದ 49 ನಗರಗಳಿಗೆ 5,260 ಕೋಟಿ ರೂ. ಹೂಡಿಕೆ ಹಾಗೂ 1,071 ಕೋಟಿ ರೂ. ಕೇಂದ್ರದ ನೆರವಿನೊಂದಿಗೆ 82,262 ಮನೆಗಳನ್ನು ಮಂಜೂರು ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ 24 ನಗರಗಳು ಮತ್ತು ಪಟ್ಟಣಗಳಲ್ಲಿ 240 ಕೋಟಿ ರೂ. ಹೂಡಿಕೆ ಮತ್ತು ಕೇಂದ್ರದ 74 ಕೋಟಿ ರೂ. ನೆರವಿನೊಂದಿಗೆ 4,915 ಮನೆಗಳನ್ನು ಮಂಜೂರು ಮಾಡಿದೆ. ದಾದರ್ ಮತ್ತು ನಾಗರ್ ಹವೇಲಿಯ ರಾಜಧಾನಿ ಸಿಲ್ವಾಸ್ಸಾಗೆ 26 ಕೋಟಿ ರೂ. ಹೂಡಿಕೆ ಮತ್ತು 1 ಕೋಟಿ ರೂ. ಕೇಂದ್ರ ನೆರವಿನೊಂದಿಗೆ 803 ಮನೆಗಳನ್ನು ಮಂಜೂರು ಮಾಡಲಾಗಿದೆ.
ಪಿಎಂಎವೈ (ನಗರ) ಯೋಜನೆಯ ಫಲಾನುಭವಿಗಳ ಆಧಾರಿತ ನಿರ್ಮಾಣ (ಬಿಎಲ್ಸಿ) ಅಡಿಯಲ್ಲಿ 46,823 ಹೊಸ ಮನೆಗಳ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಎಲ್ಸಿ ಅಡಿಯಲ್ಲಿ 773 ಮನೆಗಳ ನಿರ್ಮಾಣ ಹಾಗೂ ಮಧ್ಯಪ್ರದೇಶದಲ್ಲಿ ಸಹಭಾಗಿತ್ವದ ಮನೆಗಳ ನಿರ್ಮಾಣ (ಎಎಚ್ಪಿ) ಅಡಿಯಲ್ಲಿ 46,499 ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಅಲ್ಲದೇ ಮಧ್ಯಪ್ರದೇಶದಲ್ಲಿ ಬಿಎಲ್ಸಿ ಅಡಿಯಲ್ಲಿ 39,763 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ತಮ್ಮ ಒಡೆತನದ ಸ್ವಂತ ಭೂಮಿಯಲ್ಲಿ ಮನೆ ನಿರ್ಮಿಸಲು ನೆರವು ನೀಡಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.