ನವದೆಹಲಿ: ಜಗತ್ತಿನಾದ್ಯಂತ ಏರುತ್ತಿರುವ ಸಾವಿನ ಪ್ರಮಾಣಕ್ಕೆ ಕಾರಣವಾಗಿರುವ ಕ್ಯಾನ್ಸರ್, ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಹಿಡಿದಂತಿದೆ. ಇಂಥದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕುಳಿದ ನೀಲಮ್ ಕುಮಾರ್, ಇದರಿಂದ ಗೆದ್ದು ಬಂದ ಇತರರ ಪ್ರೇರಕ ಕಥೆಗಳನ್ನು ಹೊಂದಿದ ಕಾಮಿಕ್ ಪುಸ್ತಕ ಬರೆಯಲು ಮುಂದಾಗಿದ್ದಾರೆ.
ವಿಶೇಷವೆಂದರೆ ಬಾಲಿವುಡ್ ಮೆಗಾ ಸ್ಟಾರ್ ಬಿಗ್-ಬಿ ಅಮಿತಾಭ್ ಬಚ್ಚನ್ ಹಾಗೂ ಉದ್ಯಮಿ ರತನ್ ಟಾಟಾ ಅವರು ನೀಲಮ್ ಕುಮಾರ್ ಬರೆಯಲಿರುವ ಪುಸ್ತಕಕ್ಕೆ ಬೆಂಬಲವಾಗಿ ಧನ ಸಹಾಯ ಮಾಡಲಿದ್ದಾರೆ.
ನಾನು ಈಗಾಗಲೇ 7 ಪುಸ್ತಕಗಳನ್ನು ಬರೆದಿದ್ದು, ಪ್ರತಿ ಪುಸ್ತಕ ಕ್ಯಾನ್ಸರ್ನಿಂದ ಬದುಕುಳಿದ ಮತ್ತು ಕಾಳಜಿ ವಹಿಸುವವರಿಗೆ ಸಹಾಯವಾಗಿದೆ. ಈ ಪುಸ್ತಕಗಳ ಯಶಸ್ಸಿನ ಬಳಿಕ ಅಮಿತಾಭ್ ಬಚ್ಚನ್ ಹಾಗೂ ರತನ್ ಟಾಟಾ ಅವರು ಮುಂದಿನ ಎರಡು ಪುಸ್ತಕಗಳಿಗೆ ನಿಧಿ ಸಹಾಯ ಮಾಡುವುದಾಗಿ ಹೇಳಿದ್ದಾರೆ ಎಂದು ನೀಲಮ್ ಕುಮಾರ್ ಸೆಲ್ಫ್ ವಿ ಅಭಿಯಾನದಲ್ಲಿ ಹೇಳಿದ್ದಾರೆ.
ಸೆಲ್ಫ್ ವಿ ಅಭಿಯಾನದಲ್ಲಿ ಕ್ಯಾನ್ಸರ್ನಿಂದ ಬದುಕುಳಿದವರು ತಮ್ಮ ಕ್ಯಾನ್ಸರ್ ವಿರುದ್ಧದ ಹೋರಾಟದ ಜೀವನ ಕಥೆಗಳನ್ನು ಹೇಳುತ್ತಾರೆ.
ಪಿಂಕ್ ಹೋಪ್ ಕ್ಯಾನ್ಸರ್ ಪೇಷೆಂಟ್ ಸಪೋರ್ಟ್ ಗ್ರೂಪ್ ಹಾಗೂ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ ‘ಸೆಲ್ಫ್ ವಿ’ ಆಯೋಜಿಸಿದ್ದು, ಇದು ಭಾರತದ ಅತಿ ದೊಡ್ಡ ಕ್ಯಾನ್ಸರ್ ಸಹಾಯಕ ಅಭಿಯಾನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.