ದೆಹಲಿ: ಭಾರತದ ಮೊದಲ ಬುಲೆಟ್ ಟ್ರೈನ್ ಅಂದಾಜು 21 ಕಿ.ಮೀ ಸಮುದ್ರದೊಳಗೆ ಓಡಲಿದೆ. ಸಮುದ್ರದೊಳಗಿನ ಭೂಮಿಯ ಪರೀಕ್ಷಾರ್ಥವಾಗಿ ಇದೀಗ 7 ಕಿ.ಮೀ ಸುರಂಗ ಕೊರೆಯುವ ಮೂಲಕ ಪರೀಕ್ಷಿಸಲಾಗುತ್ತಿದೆ.
508 ಕಿ.ಮೀ ದೂರದ ಮುಂಬೈ -ಅಹಮದಾಬಾದ್ ಮಧ್ಯೆ ಬುಲೆಟ್ ಟ್ರೈನ್ ಓಡಲಿದ್ದು, ಅದಕ್ಕಾಗಿ ಸಮುದ್ರದ ತಳದಲ್ಲಿ 21 ಕಿ.ಮೀ ಉದ್ದದ ಸುರಂಗ ಮಾರ್ಗವೂ ಇರಲಿದೆ. 350 ಕಿ.ಮೀ ವೇಗದಲ್ಲಿ ಓಡಲಿರುವ ಈ ಟ್ರೈನ್ ಪ್ರಯಾಣಿಕರಿಗೆ ಸಮುದ್ರದ ತಳದಲ್ಲಿ ವಿಭಿನ್ನ ಅನುಭವ ನೀಡಲಿದೆ.
ಠಾಣೆ ಮತ್ತು ವಿರಾನ್ ಮಧ್ಯೆ ಇರುವ ಸಮುದ್ರ ತಳದ 21 ಕಿ.ಮೀ ವ್ಯಾಪ್ತಿಯನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗುವುದು. ಕೆಳದಲ್ಲಿರುವ ಮಣ್ಣು ಹಾಗೂ ಕಲ್ಲುಬಂಡೆಗಳನ್ನು ಪರೀಕ್ಷಿಸಲಾಗುತ್ತಿದ್ದು ಭೌಗೋಳಿಕವಾಗಿ ಪರಿಶೀಲಿಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಭೂಸ್ವಾಧೀನ ತಡೆಯುವ ಉದ್ದೇಶದಿಂದ ಈ ಪ್ರಕ್ರಿಯೆಗೆ ಮುಂದಾಗಿರುವುದಾಗಿ ತಿಳಿಸಿರುವ ಅಧಿಕಾರಿಗಳು, 2018 ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಅಂದಾಜು 2023 ರ ವೇಳೆಗೆ ಪೂರ್ಣಗೊಳಿಸುವ ಯೋಜನೆ ಇದೆ. ಈ ಯೋಜನೆಗೆ ಒಟ್ಟು 97,636 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.