ಬೆಂಗಳೂರು: ಜಗತ್ತಿನ ಅತಿ ಎತ್ತರದ 22 ಅಡಿ ಎತ್ತರದ ವಾಲ್ಮೀಕಿ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದ್ದು, ತಮಿಳುನಾಡಿನ ಮಹಾಬಲಿಪುರಂನಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
25 ಟನ್ ತೂಕ ಹೊಂದಿರುವ ಇದು, 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಪ್ಪು ಶಿಲೆಯಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಮೂಲತಃ ಮೂರ್ತಿ 12 ಅಡಿ ಇದ್ದರೂ, ಅದರ ಮಂಟಪ ಎಲ್ಲವೂ ಸೇರಿ ಒಟ್ಟು 22 ಅಡಿ ಎತ್ತರದಲ್ಲಿ ಕಂಗೊಳಿಸಲಿದೆ ಎಂದು ವಾಲ್ಮೀಕಿ ಸಮುದಾಯದ ಮುಖ್ಯಸ್ಥ ಎಂ.ನರಸಿಂಹಯ್ಯ ಹೇಳಿದ್ದಾರೆ.
ಮೂರು ಎಕರೆ ಭೂಮಿಯಲ್ಲಿ ವಾಲ್ಮೀಕಿ ತಪೋವನವೂ ಸಿದ್ಧವಾಗುತ್ತಿದ್ದು ಅದೊಂದು ಅಧ್ಯಾತ್ಮಿಕ ಕೇಂದ್ರವಾಗಲಿದೆ. 2010 ರಿಂದ ಕರ್ನಾಟಕ ಸರ್ಕಾರ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತ ಬಂದಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ.7 ಇರುವ ವಾಲ್ಮೀಕಿ ಸಮುದಾಯವೂ, ಅಧಿಕಾರಕ್ಕೆ ಬರುವ ಪ್ರತಿ ಸರ್ಕಾರವನ್ನೂ ಈ ಕುರಿತು ಆಗ್ರಹಿಸುತ್ತಲೇ ಬಂದಿತ್ತು.
ವಾಲ್ಮೀಕಿ ಪುತ್ಥಳಿ ಸ್ಥಾಪನೆಯ ಹಿಂದೆ ಯಾವುದೇ ರಾಜಕೀಯ ಲೆಕ್ಕಾಚಾರವಿಲ್ಲ. ಇದೊಂದು ಅಪ್ಪಟ ಮಹಾನ್ ಸಂತನಿಗೆ ನೀಡುವ ಗೌರವ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿದ್ದಾರೆ.
ವಾಲ್ಮೀಕಿ ತಪೋವನಕ್ಕೆಂದು 3 ಕೋಟಿ ರೂಪಾಯಿ ನೀಡಿರುವ ಸಿ.ಎಂ ಸಿದ್ದರಾಮಯ್ಯ, ಜಾಗವನ್ನು ನೀಡಿದ್ದಾರೆ. ಸಮುದಾಯದ ಜನರೂ ಇದಕ್ಕೆ ಸಾಕಷ್ಟು ಸಹಾಯ ಸಹಕಾರ ನೀಡಿದ್ದಾರೆ ಎಂದು ಉಗ್ರಪ್ಪ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.