ನವದೆಹಲಿ: ಬಾಂಗ್ಲಾದೇಶದೊಂದಿಗೆ ಭೂ ಗಡಿರೇಖೆ ಒಪ್ಪಂದಕ್ಕೆ ಸಂಬಂಧಿಸಿದ ಐತಿಹಾಸಿಕ ಮಸೂದೆಯೊಂದಕ್ಕೆ ಗುರುವಾರ ಲೋಕಸಭೆಯಲ್ಲಿ ಅನುಮೋದನೆ ದೊರೆಯಿತು. ಉಪಸ್ಥಿತರಿದ್ದ ಎಲ್ಲಾ 331 ಸದಸ್ಯರೂ ಈ ಮಸೂದೆಯ ಪರವಾಗಿ ಮತ ಹಾಕಿದರು. ಈ ಹಿನ್ನಲೆಯಲ್ಲಿ ಇದು ಸರ್ವಾನುಮತದಿಂದ ಅನುಮೋದನೆಗೊಂಡಿತು.
ಭಾರತ ಮತ್ತು ಬಾಂಗ್ಲಾದೇಶದ ನಡುವೆ 1974ರಲ್ಲಿ ನಡೆದಿರುವ ಒಪ್ಪಂದ ಜಾರಿಗೆ ಸಂಬಂಧಿಸಿದ ಸಂವಿಧಾನದ ೧೧೯ನೇ ತಿದ್ದುಪಡಿ ಮಸೂದೆ ಇದಾಗಿದೆ. ಎರಡೂ ದೇಶಗಳೂ ಭೂಭಾಗವನ್ನು ವಿನಿಮಯ ಮಾಡಿಕೊಂಡು ಹೊಸಗಡಿ ರೇಖೆಯನ್ನು ಒಪ್ಪಿಕೊಳ್ಳುವುದಕ್ಕೆ ಈ ಮಸೂದೆ ಅವಕಾಶ ಕಲ್ಪಿಸುತ್ತದೆ.
ಈ ಒಪ್ಪಂದದ ಪ್ರಕಾರ ಪಶ್ಚಿಮಬಂಗಾಳ, ತ್ರಿಪುರಾ, ಅಸ್ಸಾಂ ಮತ್ತು ಮೇಘಾಲಯದಲ್ಲಿರುವ ಕೆಲವು ಭೂಪ್ರದೇಶಗಳನ್ನು ಬಾಂಗ್ಲಾದೇಶದೊಂದಿಗೆ ಮಾಡಿಕೊಳ್ಳಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ‘ಈ ಒಪ್ಪಂದ ಎರಡೂ ರಾಷ್ಟ್ರಗಳಿಗೂ ಪ್ರಯೋಜಕಾರಿಯಾಗಿದ್ದು, ಒಂದು ಅಂದಾಜಿನ ಪ್ರಕಾರ ಭಾರತಕ್ಕೆ 510 ಎಕರೆ ಮತ್ತು ಬಾಂಗ್ಲಾದೇಶಕ್ಕೆ 10 ಸಾವಿರ ಎಕರೆ ಭೂಮಿ ಸಿಗಲಿದೆ. ಅಕ್ರಮ ವಲಸೆಯನ್ನೂ ಇದರಿಂದ ತಡೆಯಬಹುದು, ಬೇಲಿ ಇರದ ಜಾಗಕ್ಕೆ ಬೇಲಿ ಹಾಕಲಾಗುತ್ತದೆ’ ಎಂದರು.
ಮಸೂದೆ ಅನುಮೋದನೆಗೆ ಸಹಕರಿಸಿ ವಿರೋಧಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.