ಬೆಂಗಳೂರು: ತಮಿಳುನಾಡಿನಲ್ಲಿ ಜಲ್ಲಿಕಟ್ಟು ವಿವಾದ ವಿರಾಟ್ ಸ್ವರೂಪ ಪಡೆಯುತ್ತಿದ್ದಂತೆ ರಾಜ್ಯದಲ್ಲೂ ಕಂಬಳದ ಪರವಾಗಿಯೂ ಕೂಗೂ ಜೋರಾಗಿತ್ತು. ಇದೀಗ ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕಂಬಳಕ್ಕೆ ಕಾನೂನಿನ ಮಾನ್ಯತೆ ನೀಡಲು ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದೆ.
ಕಂಬಳದ ಜೊತೆ ಹೋರಿ, ಎತ್ತಿನ ಗಾಡಿ ಓಡಿಸುವ ಆಟಗಳಿಗೂ ಮಸೂದೆಯಲ್ಲಿ ಅನುಮತಿ ನೀಡಲಾಗಿದ್ದು, ಸ್ಪರ್ಧೆಯಲ್ಲಿ ಬಳಸುವ ಪ್ರಾಣಿಗಳ ಮಾಲಿಕರು ಅವುಗಳಿಗೆ ಹಿಂಸೆ ನೀಡುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.
ನಾಯಿ, ದೇಸಿ ಕೋಣ ಹಾಗೂ ಜಾನುವಾರುಗಳ ಹಿತವನ್ನೂ ಕಾಪಾಡುವಂತೆ ಮಸೂದೆಯಲ್ಲಿ ಹೇಳಲಾಗಿದ್ದು, ಈ ವಿಧೇಯಕದಲ್ಲಿಲ್ಲದ ಪ್ರಾಣಿಗಳನ್ನು ಆಟಗಳಿಗೆ ಬಳಸುವಂತಿಲ್ಲ, ನಿಯಮಗಳಿಗನುಸಾರವಾಗಿಯೇ ಪ್ರಾಣಿಗಳನ್ನು ಬಳಸಬೇಕು ಎಂಬ ಷರತ್ತು ವಿಧೇಯಕದಲ್ಲಿದೆ.
ಅಧಿವೇಶನದ ಅಂತಿಮ ದಿನ ಈ ವಿಧೇಯಕವನ್ನು ಅಂಗೀಕಾರ ಮಾಡುವ ಸಾಧ್ಯತೆ ಇದ್ದು, ನಂತರ ಕಂಬಳ, ಎತ್ತಿನಗಾಡಿ ಇತ್ಯಾದಿಗಳಿಗೆ ಕಾನೂನಿನ ಬಲ ಸಿಕ್ಕಂತಾಗುತ್ತದೆ.
ರಾಜ್ಯ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ಈ ವಿಧೇಯಕ ಮಂಡಿಸಲಾಗಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.