ಗಾಂಧಿನಗರ: ಗುಜರಾತ್ ಶಿಕ್ಷಣ ಇಲಾಖೆ 9ರಿಂದ 12ನೇ ತರಗತಿಯ ವಿಜ್ಞಾನ ವರ್ಗದ ವಿದ್ಯಾರ್ಥಿಗಳಿಗೆ ಗುಜರಾತ್ ರಾಜ್ಯ ಬೋರ್ಡ್ ಪಠ್ಯಕ್ರಮದ ಆಧಾರದಲ್ಲಿ ತನ್ನದೇ ಆದ ಪ್ರಶ್ನೆಪತ್ರಿಕೆಯ ಮಾದರಿಯನ್ನು ಬಿಡುಗಡೆ ಮಾಡಿದೆ.
ಮತ್ತೊಂದೆಡೆ ಇಲಾಖೆ ಸೆಪ್ಟೆಂಬರ್ 2016ರಲ್ಲಿ ಬಿಡುಗಡೆ ಮಾಡಿದ ಪ್ರಾಯೋಗಿಕ ಯೋಜನೆಯಡಿ ಪ್ರಸ್ತುತ ಇರುವ 57 ಶಾಲೆಗಳ ಪಟ್ಟಿಗೆ ಇನ್ನಷ್ಟು ಶಾಲೆಗಳನ್ನು ಸೇರಿಸುವುದರ ಜೊತೆಗೆ ಈ ಶಾಲೆಗಳಿಗೆ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ (ಎನ್ಸಿಇಆರ್ಟಿ) ಪಠ್ಯಪುಸ್ತಕಗಳನ್ನು ಪುನಃ ಜಾರಿಗೆ ತರಲು ಚಿಂತನೆ ನಡೆಸಿದೆ.
ಗಾಂಧಿನಗರದಲ್ಲಿ ಶಿಕ್ಷಣ ಸಚಿವ ಭುಪೇಂದ್ರ ಸಿಂಗ್ ಚುಡಾಸಮ ಹಾಗೂ ರಾಜ್ಯ ಶಿಕ್ಷಣ ಸಚಿವ ನನುಭಾಯ್ ವಣನಿ ಉಪಸ್ಥಿತಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರು, ಪ್ರಾಂಶುಪಾಲರು ಮತ್ತು ಶಿಕ್ಷಣ ತಜ್ಞರು ಎನ್ಸಿಇಆರ್ಟಿ ಪಠ್ಯಪುಸ್ತಕ ಜಾರಿಗೆ ತರುವ ಬಗ್ಗೆ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.
ಎನ್ಸಿಇಆರ್ಟಿ ಪುಸ್ತಕಗಳನ್ನು ಪರಿಚರಿಸಿರುವುದು ಒಂದು ಧನಾತ್ಮಕ ವಿಚಾರ ಎಂದು ಹೆಚ್ಚಿನ ಶಾಲೆಗಳು ತಿಳಿಸಿವೆ. ಸಮಿತಿಯು ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಇದರ ವರದಿ ಸಲ್ಲಿಸಲಿದ್ದು, ಈ ಯೋಜನೆಯಡಿ ಎಷ್ಟು ಶಾಲೆಗಳು ಮತ್ತು ಜಿಲ್ಲೆಗಳನ್ನು ಸೇರಿಸಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸಿದ ಬಳಿಕ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸುನೈನಾ ತೋಮರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.