ನವದೆಹಲಿ: ಕಾಶ್ಮೀರ ಭಾರತಕ್ಕೆ ಸಂಬಂಧಿಸಿದ್ದಲ್ಲ, ಭಾರತ ಕಾಶ್ಮೀರವನ್ನು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದೆ ಎಂದು ಜೆಎನ್ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಪ್ರೊ. ನಿವೇದಿತಾ ಮೆನನ್ ಹೇಳಿದ್ದಾರೆ.
ಜೋಧಪುರ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮೆನನ್, ಸಿಯಾಚಿನ್ ಹಾಗೂ ಕಾಶ್ಮೀರದಿಂದ ಭಾರತೀಯ ಸೇನೆಯನ್ನು ಹೊರಗಟ್ಟಬೇಕಿದೆ, ಭಾರತೀಯ ಸೈನಿಕರು ದೇಶವನ್ನು ಪ್ರೀತಿಸುವುದಿಲ್ಲ, ಅವರು ದೇಶಕ್ಕಾಗಿ ಹೋರಾಡುವುದಿಲ್ಲ, ಹಣ ಹಾಗೂ ಲಾಭಕ್ಕಾಗಿ ಹೋರಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರೊ.ನಿವೇದಿತಾ ಮೆನನ್ ಹಾಗೂ ಸಂಘಟಕರಲ್ಲೊಬ್ಬರಾದ ರಾಜಶ್ರೀ ರಣಾವತ್ ಅವರ ವಿರುದ್ಧ ವಿಶ್ವವಿದ್ಯಾಲಯವತಿಯಿಂದ ದೂರು ದಾಖಲಿಸಲಾಗಿದೆ ಎಂದು ಜೋಧಪುರ ವಿವಿ ಕುಲಪತಿ ಆರ್.ಪಿ.ಸಿಂಗ್ ಹೇಳಿದ್ದಾರೆ.
ಭಾರತದ ವಿರುದ್ಧ ಪ್ರೊ.ನಿವೇದಿತಾ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಆದರೆ ಏನಿಲ್ಲವೆಂದರೂ ತಿಂಗಳಿಗೆ ಅಂದಾಜು 2 ಲಕ್ಷ ರೂಪಾಯಿ ಸಂಬಳವನ್ನು ಆಕೆ ಪಡೆಯುವುದು ಇದೇ ದೇಶದ್ದು. ಅದರೊಂದಿಗೆ ಅನೇಕ ಸೌಭ್ಯಗಳು ಬೇರೆ. ಆದರೂ ಉಂಡ ಮನೆಗೆ ಎರಡು ಬಗೆಯುವ ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಈ ರೀತಿಯ ಅಪಾಯಕಾರಿ ಬೋಧಕ ವರ್ಗವಿರುವ ಪರಿಣಾಮವೇ ಜೆಎನ್ಯುದಲ್ಲಿ ದೇಶ ವಿರೋಧಿ ಘಟನೆಗಳು ನಡೆಯುತ್ತವೆ ಎನ್ನಬಹುದು.
ಕಳೆದ ಫೆಬ್ರುವರಿಯಲ್ಲಿ ಜೆನ್ಯು ವಿದ್ಯಾರ್ಥಿಗಳು ಉಗ್ರ ಅಫ್ಜಲ್ ಹಾಗೂ ಯಾಕೂಬ್ ಪರ ಘೋಷಣೆ ಕೂಗಿದ್ದರು. ಈ ಘೋಷಣೆಗಳಲ್ಲಿ ಭಾರತದ ಸಮಗ್ರತೆಗೆ ಧಕ್ಕೆ ತರುವ ಅಂಶಗಳೂ ಇದ್ದವು. ಇವೆಲ್ಲಕ್ಕೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಕನ್ಹಯ್ಯ ಕುಮಾರ್, ಭಾರತೀಯ ಸೇನೆ ಎಂದರೆ ಅತ್ಯಾಚಾರಿಗಳು ಎಂದು ಹೇಳಿದ್ದ.
2011 ರಲ್ಲಿ 72 ಮಂದಿ ಸಿಆರ್ಪಿಎಫ್ ಸೈನಿಕರು ನಕ್ಸಲರ ದಾಳಿಗೆ ಬಲಿಯಾದಾಗ ಜೆನ್ಯು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಸಂಭ್ರಮ ಆಚರಿಸಿದ್ದರು ಇಲ್ಲಿ ಉಲ್ಲೇಖನೀಯ.
ಯಾವುದೇ ಉಗ್ರನಿಗೂ ಕಡಿಮೆ ಇಲ್ಲದಂತೆ ಮೇಲಿಂದ ಮೇಲೆ ದೇಶವಿರೋಧಿ ಹೇಳಿಕೆ ನೀಡುವ ಪ್ರೊ.ನಿವೇದಿತಾ ಮೆನನ್ ಅವರ ವಿರುದ್ಧ ಕಠಿಣ ಕ್ರಮದ ಲಕ್ಷಣಗಳು ದಟ್ಟವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.