ಧಾರವಾಡ : ರಾಜ್ಯ ಓಲಿಂಪಿಕ್ನ ಮೂರನೇ ದಿನ ಆತಿಥೇಯ ಧಾರವಾಡ ಮಹಿಳಾ ವಿಭಾಗದ ಪಟುಗಳು ಟೈಕ್ವಾಂಡೋ ಸ್ಪರ್ಧೆಯ 42 ಕೆ.ಜಿ, 50 ಕೆ.ಜಿ ಹಾಗೂ 70 ಕೆ.ಜಿಗಳಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.
42 ಕೆಜಿ ವಿಭಾಗದಲ್ಲಿ ಶ್ರೇಯಾ ರಾಯಬಾಗಿ. ಧಾರವಾಡ ಪ್ರಥಮ ಸ್ಥಾನ (ಚಿನ್ನ), ಸವಿತಾ ವಿ ಬೆಂಗಳೂರ ಗ್ರಾಮಾಂತರ (ಬೆಳ್ಳಿ) ದ್ವಿತೀಯ ಸ್ಥಾನ. ಹಾಗೂ ಶ್ರಧ್ದಾ ಭಟಾಲೆ, ಬೆಳಗಾಂ ಮತ್ತು ಅಕ್ಷತಾ ಗಾಟೇಕರಿ, ಚಿತ್ರದುರ್ಗ ತೃತೀಯ (ಕಂಚು) ಸ್ಥಾನಗಳನ್ನು ಗೆದ್ದರು.
50 ಕೆಜಿಯಲ್ಲಿಯೂ ಸೃಷ್ಟಿ ಧಾರವಾಡ ಪ್ರಥಮ ಸ್ಥಾನ(ಚಿನ್ನ) ಪಡೆದು ಗೆಲುವಿನ ನಗೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸ್ನೇಹಾಲ್ ದೇಸಾಯ್ ಚಿಕ್ಕಬಳ್ಳಾಪುರ, ದ್ವಿತೀಯ ಸ್ಥಾನ(ಬೆಳ್ಳಿ) ಮತ್ತು ನವೀತಾ ಆರ್, ರಾಮನಗರ, ಶ್ರದ್ದಾ ಜಾಡೋನ್ ಬೆಂಗಳೂರ ಗ್ರಾಮಾಂತರ (ಕಂಚು) ಗೆದ್ದುಕೊಂಡರು.
60 ಕೆಜಿ ವಿಭಾಗದಲ್ಲಿ ವೈಷ್ಣವಿ ಮೇತ್ರಿ, ಬೆಳಗಾವಿ ಪ್ರಥಮ ಸ್ಥಾನ. ನಿಖಿತಾ ಎಮ್ ಎಲ್, ರಾಮನಗರ ದ್ವಿತೀಯ ಸ್ಥಾನ, ಹಾಗೂ ದನೀಯಾ ಬೇಗಂ, ಬೆಂಗಳೂರ ಗ್ರಾಮಾಂತರ ಮತ್ತು ಯುವಶ್ರೀ ಎಸ್ (ಕಂಚು) ಬೆಂಗಳೂರು ನಗರ ತೃತೀಯ ಸ್ಥಾನ ಗೆದ್ದರು.
70 ಕೆಜಿ ವಿಭಾಗದಲ್ಲಿ ಶ್ವೇತಾ ಪವಾರ ಧಾರವಾಡ ಪ್ರಥಮ ಸ್ಥಾನ(ಚಿನ್ನ) ಮತ್ತು ರಶ್ಮಿ ದ್ವಿತೀಯ ಸ್ಥಾನ(ಬೆಳ್ಳಿ) ಬೆಂಗಳೂರು ಗ್ರಾಮಾಂತರ ಹಾಗೂ ಸುನೀತಾಶ್ರೀ ಜಗಪತಿ, ರಾಮನಗರ ಮತ್ತು ಮುಸ್ಕಾನ್ ಅವಾಟಿ, ಬೆಳಗಾಂ ತೃತೀಯ ಸ್ಥಾನಗಳನ್ನು ಪಡೆದು ಕೊಂಡರು.
ಪುರುಷರ ವಿಭಾಗ: ಶಿವಕುಮಾರಗೆ 2 ಚಿನ್ನ
ಪುರುಷರ 45 ಕೆಜಿ ವಿಭಾಗದಲ್ಲಿ ಶಿವಕುಮಾರ ಕೆ.ವಿ ಬೆಂಗಳೂರು ಗ್ರಾಮಾಂತರ ಪ್ರಥಮ ಸ್ಥಾನ (ಚಿನ್ನ), ಕರಣ್ ಯು ಪವಾರ್ ರಾಮನಗರ ದ್ವಿತೀಯ ಸ್ಥಾನ(ಬೆಳ್ಳಿ). ವಸಂತ ರಾಜ್ ಧಾರವಾಡ ಹಾಗೂ ಪ್ರಜ್ವಲ್ ಎಂ ಬೆಂಗಳೂರ ನಗರ (ಕಂಚು) ತೃತೀಯ ಸ್ಥಾನ ಗೆದ್ದರು.
56 ಕೆಜಿ ವಿಭಾಗದಲ್ಲಿ ಬಾಬುಲಾಲ್ ಡಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನ(ಚಿನ್ನ). ಸುಚಿತ್ ಎಸ್ ಬೆಂಗಳೂರು ಗ್ರಾಮಾಂತರ ದ್ವಿತೀಯ ಸ್ಥಾನ(ಬೆಳ್ಳಿ) ಹಾಗೂ ಅನಿಲ ಕೊರವಿ ಬೆಳಗಾವಿ ಮತ್ತು ಬೊಸೈ ಬಿ ಚಿತ್ರದುರ್ಗ ತೃತೀಯ ಸ್ಥಾನ ಪಡೆದರು.
69 ಕೆಜಿ ವಿಭಾಗದಲ್ಲಿ ಶಿವಕುಮಾರ, ಬೆಂಗಳೂರು ನಗರ ಪ್ರಥಮ ಸ್ಥಾನ(ಚಿನ್ನ) ಗೋವಿಂದ ಆರ್ (ಬೆಳ್ಳಿ) ದ್ವಿತೀಯ ಹಾಗೂ ಪ್ರತಾಪ ಜಿ ಚಿಕ್ಕಬಳ್ಳಾಪುರ ಹಾಗೂ ಮೊಹಮ್ಮದ್ ಎಸ್ ರಾಮನಗರ (ಕಂಚು)
82 ಕೆಜಿ ವಿಭಾಗದಲ್ಲಿ ಮೈನುದ್ದೀನ್ ಧಾರವಾಡ (ಚಿನ್ನ) ಪ್ರಥಮ ಸ್ಥಾನ. ಕಿರಣ್ ಪವಾರ್ ಬೆಂಗಳೂರು ನಗರ ದ್ವಿತೀಯ (ಬೆಳ್ಳಿ) ವಿರೇಂದ್ರ ಚಿತ್ರದುರ್ಗ ಹಾಗೂ ವಿಜಯ ಕೊರವರ (ಕಂಚು) ತೃತೀಯ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.