ಅಲೆಪ್ಪಿ: ಕೇರಳದ ಅಲೆಪ್ಪಿಯಲ್ಲಿನ ಕ್ರೀಡಾ ತರಬೇತಿ ಸಂಸ್ಥೆಯಲ್ಲಿ ವಿಷದ ಹಣ್ಣನ್ನು ಸೇವನೆ ಮಾಡಿ ಒರ್ವ ಬಾಲಕಿ ಮೃತಳಾಗಿದ್ದಾಳೆ. ಮೂವರ ಸ್ಥಿತಿ ಗಂಭೀರವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಇವರು ವಿಷಯುಕ್ತ ಹಣ್ಣನ್ನು ಸೇವಿಸಿದರು ಎನ್ನಲಾಗಿದೆ.
ಈ ನಾಲ್ವರು ಹುಡುಗಿಯರು ರೋವರ್ಸ್ಗಳಾಗಿದ್ದು, ಅಲೆಪ್ಪಿಯ ವಾಟರ್ಸ್ಪೋರ್ಟ್ಸ್ ಸೆಂಟರ್ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದರು. ಇವರಿಗೆ ತರಬೇತಿದಾರರು ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮೃತ ಬಾಲಕಿಗೆ ದೋಣಿಯ ಹುಟ್ಟಿನಿಂದ ಬಾರಿಸಲಾಗಿತ್ತು. ಈ ಬಗ್ಗೆ ಆಕೆ ಅಧಿಕಾರಿಗಳಿಗೆ ದೂರು ಕೂಡ ನೀಡಿದ್ದಳು ಆದರೆ ಅವರು ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂಬ ಆರೋಪವಿದೆ.
ಬುಧವಾರ ರಾತ್ರಿ ನಾಲ್ವರೂ ತಮ್ಮ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅದರಲ್ಲಿ ಒರ್ವ ಬಾಲಕಿ ಮೃತಪಟ್ಟಿದ್ದಾಳೆ. ಕಿರುಕುಳವನ್ನು ಸಹಿಸಲಾಗದೆಯೇ ಇವರು ವಿಷದ ಹಣ್ಣನ್ನು ಸೇವಿಸಿದ್ದಾರೆ ಎಂಬುದು ಕುಟುಂಬ ಸದಸ್ಯರ ಗಂಭೀರ ಆರೋಪ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.