ಮುಂಬಯಿ : ಹುಡುಗಿಯರು ಕುರೂಪಿಗಳಾಗಿರುವುದು ಮತ್ತು ಅಂಗವೈಕಲ್ಯತೆ ಹೊಂದಿರುವುದು ವರದಕ್ಷಿಣೆ ಬೇಡಿಕೆಗೆ ಕಾರಣವಾಗಿದೆ ಎಂದು ಮಹಾರಾಷ್ಟ್ರದ 12 ನೇ ತರಗತಿಯ ಪಠ್ಯಪುಸ್ತಕದಲ್ಲಿ ಪ್ರಕಟಿಸಲಾಗಿದೆ.
ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಅಥಾರಿಟಿಯ 12 ನೇ ತರಗತಿಯ ಸಮಾಜ ಶಾಸ್ತ್ರ ಪಠ್ಯ ಪುಸ್ತಕದಲ್ಲಿ ಭಾರತದಲ್ಲಿರುವ ಪ್ರಮುಖ ಸಾಮಾಜಿಕ ಸಮಸ್ಯೆಗಳು ಎಂಬ ಶೀರ್ಷಿಕೆಯಡಿ ಹುಡುಗಿಯು ಕುರೂಪಿಯಾಗಿದ್ದು, ಆಕೆ ಅಂಗವೈಕ್ಯಲತೆ ಹೊಂದಿದ್ದರೆ ಅವಳ ಮದುವೆ ಮಾಡುವುದು ಕಷ್ಟಕರವಾಗುತ್ತದೆ. ಅವಳ ಪೋಷಕರು ಅಸಹಾಯಕರಾಗಿ ಬೇರೆ ದಾರಿ ಇಲ್ಲದೆ ವರನ ಮನೆಯವರ ಬೇಡಿಕೆಗೆ ತಲೆಬಾಗಬೇಕಾಗುತ್ತದೆ. ಇಂತಹ ಪರಿಸ್ಥಿತಿ ವರದಕ್ಷಿಣೆ ಕೊಟ್ಟು ಮದುವೆ ಮಾಡುವ ಪ್ರಕ್ರಿಯೆಗೆ ಕಾರಣವಾಗುತ್ತದೆ ಎಂದು ಪಠ್ಯ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.
ವರದಕ್ಷಿಣೆ ಎಂಬುದು ಸಾಮಾಜಿಕ ಪಿಡುಗು ಅದನ್ನು ನಿಮೂರ್ಲನೆಗೊಳಿಸುವ ಬಗೆ ಹೇಗೆ ಎಂಬುದನ್ನು ತಿಳಿಸುವುದರ ಬದಲು, ಹೆಣ್ಣು ಕುರೂಪಿ ಅಥವಾ ಅಂಗವೈಕಲ್ಯತೆಯನ್ನು ಹೊಂದಿದ್ದಾಗ, ಅವಳ ಮದುವೆಗೆ ವರದಕ್ಷಿಣೆ ಪ್ರಮುಖ ಕಾರಣವಾಗುತ್ತದೆ ಎಂಬುದನ್ನು ಹೇಳಲಾಗಿದೆ. ಗಂಡು ಕುರೂಪಿಯೋ, ಅಂಗವಿಕಲನೋ, ಉದ್ಯೋಗಸ್ಥನೋ, ಅನಕ್ಷರಸ್ಥನೋ ಎಂಬುದರ ಬಗ್ಗೆ ತಿಳುವಳಿಕೆ ಹೊಂದಬೇಕು ಎಂಬುದನ್ನೂ ತಿಳಿಸದೆ, ಕೇವಲ ಲಿಂಗತಾರತಮ್ಯದ ರೂಪದಲ್ಲಿ ಹೆಣ್ಣಿನ ಕುರೂಪ ಮತ್ತು ಅಂಗವೈಕಲ್ಯತೆಯೇ ಗಂಡಿನ ಕಡೆಯವರು ವರದಕ್ಷಿಣೆ ಕೇಳಲು ಪ್ರಮುಖ ಕಾರಣ ಎಂಬಂತೆ ಬಿಂಬಿಸಲಾಗಿದೆ. ಇದು ಸಮಾಜ ಇಂದು ಯಾವ ಮಟ್ಟದಲ್ಲಿ ಚಿಂತಿಸುತ್ತಿದೆ ಎಂಬುದನ್ನು ಮಕ್ಕಳಿಗೆ ತಿಳಿಹೇಳುವ ಪ್ರಯತ್ನವಾಗಿರದೆ, ಹಿಂದಿನಿಂದಲೂ ಬಂದಂತಹ ವರದಕ್ಷಿಣೆಯ ಪಿಡುಗಿಗೆ ಹೆಣ್ಣನ್ನು ಈ ರೀತಿ ಬಲಿಪಶು ಮಾಡಿರುವುದು ವಿಪರ್ಯಾಸ.
ಈ ಕುರಿತು ಅಧಿಕಾರಿಗಳನ್ನು ಕೇಳಿದಾಗ, 4 ವರ್ಷಗಳ ಹಿಂದೆ ಪಠ್ಯಪುಸ್ತಕ ಮುದ್ರಣಗೊಂಡಿದ್ದು, ಆಗ ಅದರ ಅರಿವಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ಮಹಾರಾಷ್ಟ್ರ ಶಿಕ್ಷಣ ಸಚಿವರು, ಪುಸ್ತಕ ಪ್ರಕಟವಾದ ಸಂದರ್ಭ ತಾವು ಅಧಿಕಾರದಲ್ಲೇ ಇರಲಿಲ್ಲ ಎಂದು ವಿವರಣೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.