ಶ್ರೀನಗರ : ಯೋಧನೊಬ್ಬನು ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹಿಮಪಾತ ಸಂಭವಿಸಿದ ರಸ್ತೆಯಲ್ಲಿ ಸುಮಾರು 50 ಕಿ. ಮೀ. ದೂರ ಕ್ರಮಿಸಿ ತಾಯಿಯ ಅಂತ್ಯ ಸಂಸ್ಕಾರ ನಡೆಸಿದ ಮನ ಮಿಡಿಯುವ ಘಟನೆಗೆ ನಡೆದಿದೆ.
4 ದಿನಗಳ ಹಿಂದೆ ಯೋಧ ಮೊಹಮ್ಮದ್ ಅಬ್ಬಾಸ್ನ ತಾಯಿ ನಿಧನರಾಗಿದ್ದರು. ಆದರೆ ಹಿಮಪಾತದಿಂದಾಗಿ ರಸ್ತೆಗಳು ಮುಚ್ಚಲ್ಪಟ್ಟಿದ್ದು, ಅವರ ಗ್ರಾಮಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದಾಗಿ ಸ್ವತಃ ಯೋಧನೇ ತನ್ನ ತಾಯಿಯ ಶವವನ್ನು ಹೊತ್ತು 10 ಅಡಿ ಹಿಮವಿರುವ ದಾರಿಯಲ್ಲಿ 50 ಕಿ.ಮೀ. ದೂರ ಕ್ರಮಿಸಿ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾನೆ.
25 ವರ್ಷದ ಯೋಧ ಮೊಹಮ್ಮದ್ ಅಬ್ಬಾಸ್ ಪಠಾಣ್ಕೋಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರ ತಾಯಿ ಸಕೀನಾ ಬೇಗಂ ಅವರು ಕೂಡಾ ಮಗನ ಜೊತೆಯಲ್ಲೇ ನೆಲೆಸಿದ್ದರು. ಜನವರಿ 27 ರಂದು ಹೃದಯಾಘಾತಕ್ಕೊಳಗಾಗಿ ಸಕೀನಾ ಬೇಗಂ ಅವರು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರವನ್ನು ಕರ್ನಾದಲ್ಲಿರುವ ಅಬ್ಬಾಸ್ ಅವರ ಸ್ವಗೃಹದಲ್ಲಿ ನೆರವೇರಿಸಲು ನಿರ್ಧರಿಸಿದ್ದರು. ಆದರೆ ಕಾರ್ನಾಗೆ ತೆರಳಲು ಇರುವ ರಂಗ್ವಾರ್ನ ಗ್ಯಾರಿಸನ್ ರಸ್ತೆ ಮಾರ್ಗವು ಹಿಮಪಾತದಿಂದಾಗಿ ಸಂಪೂರ್ಣ ಮುಚ್ಚಿಹೋಗಿತ್ತು.
ಯೋಧ ಅಬ್ಬಾಸ್ ಸ್ಥಳೀಯ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಹೆಲಿಕಾಪ್ಟರ್ ಮೂಲಕ ತಾಯಿಯ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲು ಕೇಳಿಕೊಂಡಿದ್ದರು. ಆದರೆ ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದರೂ, 4 ದಿನಗಳಾದರೂ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಮನನೊಂದ ಯೋಧ ಬೇರೆ ದಾರಿಯಿಲ್ಲದೆ ತನ್ನ ತಾಯಿಯ ಪಾರ್ಥಿವ ಶರೀರವನ್ನು ತನ್ನ ಹೆಗಲ ಮೇಲೇರಿಸಿಕೊಂಡು ಸುಮಾರು 50 ಕಿ.ಮೀ. ದೂರದಲ್ಲಿರುವ ಸ್ವಗ್ರಾಮ ಕರ್ನಾಗೆ ತಲುಪಿದ್ದಾರೆ. ಇವರೊಂದಿಗೆ ಕುಟುಂಬದ ಕೆಲವರು ಸಾಥ್ ನೀಡಿದ್ದಾರೆ. ಊರು ತಲುಪಿದ ನಂತರ ತಾಯಿಯ ಅಂತ್ಯ ಸಂಸ್ಕಾರವನ್ನು ನಡೆಸಿದರು. ಸುತ್ತಮುತ್ತಲಿನ ಊರಿನ ನೂರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಡಳಿತ ಹೆಲಿಕಾಪ್ಟರ್ ಒದಗಿಸದೇ ಇರುವುದರ ಬಗ್ಗೆ ಯೋಧ ಅಬ್ಬಾಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಸರಿಯಾದ ರೀತಿಯಲ್ಲಿ ತಾಯಿಯ ಅಂತ್ಯಸಂಸ್ಕಾರವನ್ನು ಮಾಡಲಿಕ್ಕಾಗಲಿಲ್ಲ ಎಂಬ ನೋವೂ ಇದೆ.
ಆದರೆ ಜಿಲ್ಲಾಡಳಿತವು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಹವಾಮಾನ ಅನುಕೂಲವಾಗಿರದ ಕಾರಣ ಕುಟುಂಬಸ್ಥರೇ ಹೆಲಿಕಾಪ್ಟರ್ ಸೇವೆಯನ್ನು ನಿರಾಕರಿಸಿದರು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.