ಅಜ್ಮೀರ್: ಪ್ರಧಾನಿ ನರೇಂದ್ರ ಮೋದಿ ಅವರ ಬಹುದಿಟ್ಟ ನಿರ್ಧಾರಗಳಲ್ಲಿ ಒಂದಾದ ನೋಟು ಅಮಾನ್ಯೀಕರಣ ಎಲ್ಲೆಡೆ ಪ್ರಶಂಸೆಗೆ ಪಾತ್ರವಾದ ಬೆನ್ನಲ್ಲೇ, ’ಕ್ಯಾಶ್ಲೆಸ್ ಸಿಸ್ಟಮ್’ ಹಾಗೂ ಮೊಬೈಲ್ ’ವ್ಯಾಲೆಟ್ ಸ್ಟ್ರಕ್ಚರ್’ ಕುರಿತ ತಿಳವಳಿಕೆ ಮೂಡಿಸಲು ಪಠ್ಯದಲ್ಲೂ ಇದನ್ನು ಸೇರಿಸುವ ಚಿಂತನೆ ನಡೆದಿದೆ.
ದಿ ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿಯು (ಆರ್ಬಿಎಸ್ಇ) ಪಿಯು ಪಠ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ’ಡಿಮಾನಿಟೈಸೇಶನ್’ ಮತ್ತು ’ಕ್ಯಾಶಲೆಸ್ ಎಕಾನಮಿ’ ಸೇರಿಸುವುದಾಗಿ ನಿರ್ಧರಿಸಿದೆ.
ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿಯ ಚೇರಮನ್ ಬಿ.ಎಲ್ ಚೌಧರಿ ಅವರೇ ಹೇಳುವಂತೆ, ವಿದ್ಯಾರ್ಥಿಗಳಿಗೆ ನಗದು ರಹಿತ ವ್ಯವಸ್ಥೆ ಹಾಗೂ ಮೊಬೈಲ್ ವ್ಯಾಲೆಟ್ ಸ್ಟ್ರಕ್ಚರ್ನ ಬಗ್ಗೆ ಪಾಠ ಮಾಡಲಾಗುವುದು ಎಂದಿದ್ದಾರೆ. ಈ ರೀತಿ ಪಠ್ಯದಲ್ಲಿ ಸೇರ್ಪಡಿಸುವುದರಿಂದ ಮಕ್ಕಳೂ ಕೂಡಾ ನೋಟು ಅಮಾನ್ಯೀಕರಣದ ಸಾಧಕ ಮತ್ತು ಬಾಧಕಗಳ ಕುರಿತು ತಿಳಿಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಶಿಕ್ಷಣ ಮಂಡಳಿಯ ಆವರಣದಲ್ಲಿರುವ ವಿದ್ಯಾರತಿ ಸೇವಾ ಕೇಂದ್ರದಲ್ಲಿ ಸ್ವೈಪಿಂಗ್ ಯಂತ್ರವನ್ನು ಅಳವಡಿಸಲಾಗುವುದು. ಇದರಿಂದ ವಿದ್ಯಾರ್ಥಿಗಳು ಪ್ರಮಾಣಿಕೃತ ನಕಲು ಅಂಕಪಟ್ಟಿಯನ್ನು ಮತ್ತು ಪ್ರಮಾಣಪತ್ರ ಪಡೆಯಲು ಅನುಕೂಲವಾಗುತ್ತದೆ ಎಂದು ಚೌಧರಿ ಹೇಳಿದ್ದಾರೆ.
ವಿದ್ಯಾರ್ಥಿಗಳು ಡೆಬಿಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿದಂತೆ ಇದನ್ನು ಬಳಸಬಹುದು ಎಂದಿರುವ ಅವರು, ಈಗಾಗಲೇ ಎಲ್ಲ ವ್ಯವಹಾರಗಳನ್ನು ಬಹುತೇಕ ನಗದು ರಹಿತ ವ್ಯವಸ್ಥೆಗೆ ತರಲಾಗಿದೆ ಎಂದೂ ಚೌಧರಿ ಹೇಳಿದ್ದಾಗಿ ವರದಿಯಾಗಿದೆ.
ಪ್ರಧಾನಿ ಮೋದಿ ಅವರ ಕನಸಿನ ನಗದು ರಹಿತ ವ್ಯವಸ್ಥೆಯನ್ನು ಪಠ್ಯರೂಪದಲ್ಲಿ ಅಳವಡಿಸುವ ಮೂಲಕ ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿ ರಚನಾತ್ಮಕ ನಿರ್ಧಾರಕ್ಕೆ ಮುಂದಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.