ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಬಳಿಕ ದೇಶದ ಆರ್ಥಿಕ ರಂಗದಲ್ಲಿ ನಗದು ರಹಿತ ವ್ಯವಹಾರ ಇತ್ತೀಚಿನ ಕಲ್ಪನೆಯಾಗಿದ್ದರೆ, ಅಸ್ಸಾಂನ ಗುವಾಹಟಿಯಿಂದ 32 ಕಿ.ಮೀ. ದೂರದ ಗ್ರಾಮದ ತೈವಾ ಬುಡಕಟ್ಟು ಜನಾಂಗದ ಜನರು ನಡೆಸುವ ವಿಶಿಷ್ಟ ಮೇಳದಲ್ಲಿ ವ್ಯವಹಾರಗಳು ಇಂದಿಗೂ ಕ್ಯಾಶ್ಲೆಸ್ ಆಗಿದೆ.
ಮಧ್ಯ ಅಸ್ಸಾಂ ಹಾಗೂ ಮೇಘಾಲಯದ ತೈವಾ ಬುಡಕಟ್ಟು ಜನಾಂಗದವರು ಕಳೆದ 5 ದಶಕಗಳಿಂದ ವಸ್ತು ವಿನಿಮಯ ವ್ಯಾಪಾರವನ್ನು ಇಂದಿಗೂ ಜೀವಂತವಾಗಿಸಿದ್ದಾರೆ. ಪ್ರತಿ ವರ್ಷ ಜನವರಿ ತಿಂಗಳ ಮೂರನೇ ವಾರದಲ್ಲಿ ಆಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಈ ಮೇಳ ಏರ್ಪಡಿಸಲಾಗುತ್ತದೆ.
ಜುನ್ (ಚಂದ್ರ) ಮತ್ತು ಬೀಲ್ (ತೇವಾಂಶವುಳ್ಳ) ‘ಜುನ್ಬೀಲ್’ ಎಂದೇ ಕರೆಯಲಾಗುವ ಜನಪ್ರಿಯ ಜಾತ್ರೆ ಮೊರಿಗಾಂವ್ನ ಅರ್ಧ ಚಂದ್ರನ ಆಕಾರದ ಜಲಾಶಯದ ಸಮೀಪ ನಡೆಸಲಾಗುತ್ತದೆ.
ಮೇಳ ನಡೆಯುವ ಕೆಲವು ದಿನಗಳ ಮೊದಲು ತೈವಾ, ಕಾರ್ಬಿ, ಖಾಸಿ, ಜೈಂತಿಯಾ ಬುಡಕಟ್ಟು ಜನಾಂಗದವರು ವಿವಿಧ ಉತ್ಪನ್ನಗಳ ಜೊತೆ ಈ ಬೆಟ್ಟಕ್ಕೆ ಆಗಮಿಸುತ್ತಾರೆ.
ಮೇಳದಲ್ಲಿ ಸಾಮಾನ್ಯವಾಗಿ ನಡೆಸುವ ಉತ್ಪನ್ನಗಳಲ್ಲಿ ಶುಂಠಿ, ಬಿದಿರಿನ ಚಿಗುರು, ಅರಿಶಿನ, ಕುಂಬಳಕಾಯಿ, ಗಿಡಮೂಲಿಕೆ ಔಷಧಿಗಳು, ಒಣ ಮೀನು, ಪೀಠಾ (ಅಕ್ಕಿಯಿಂತ ತಯಾರಿಸಲಾದ ಕೇಕ್) ಸೇರಿವೆ.
ತೈವ ರಾಜ ದೀಪ್ ಸಿಂಗ್ ದಿಯೋರಾಜ ಮೇಳಕ್ಕೆ ಚಾಲನೆ ನೀಡುತ್ತಿದ್ದು, ತನ್ನ ಆಸ್ಥಾನಿಕರ ಜೊತೆ ಈ ಸಮುದಾಯ ಹಬ್ಬದಲ್ಲಿ ಭಾಗವಿಸುತ್ತಿದ್ದು, ಜನರಿಂದ ಸಾಂಪ್ರದಾಯಿಕ ತೆರಿಗೆ ಸ್ವೀಕರಿಸುತ್ತಾರೆ.
ತೈವಾ ಸಮುದಾಯದ ಈ ಪದ್ಧತಿಯಿಂದ ನಾವು ಬಹಳಷ್ಟು ಕಲಿಯಬೇಕಿದೆ. ಇದು ಜನರಿಗೆ ಆಧುನಿಕ ಸಮಾಜದ ನಗದು ರಹಿತ ತತ್ವಗಳಿಗೆ ನಿದರ್ಶನವಾಗಿದೆ ಎಂದು ಇತ್ತೀಚೆಗೆ ಮುಕ್ತಾಯಗೊಂಡ ಮೇಳದಲ್ಲಿ ಭಾಗವಹಿಸಿದ ಬಳಿಕ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.