ನವದೆಹಲಿ: ಹೊಸ ಆದಾಯ ಘೋಷಣೆ ಯೋಜನೆ ಅಡಿಯಲ್ಲಿ ದಾಖಲೆ ರಹಿತ ದೇಶೀಯ ನಗದು ಹಿಡುವಳಿ ಘೋಷಿಸಬಹುದೇ ಹೊರತು ಆಭರಣಗಳು, ಸ್ಟಾಕ್, ಸ್ಥಿರ ಆಸ್ತಿ ಅಥವಾ ವಿದೇಶಿ ಬ್ಯಾಂಕ್ಗಳ ಖಾತೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಜಮೆ ಮಾಡಿದ ಅಘೋಷಿತ ಆದಾಯವನ್ನು ಶೇ.೫೦ರಷ್ಟು ತೆರಿಗೆ ಪಾವತಿಸುವ ಮೂಲಕ ಘೋಷಿಸಬಹುದು. ಒಟ್ಟು ಮೊತ್ತದ ಕಾಲಂಶವನ್ನು 4 ವರ್ಷಗಳ ಕಾಲ ಬಡ್ಡಿರಹಿತವಾಗಿ ಠೇವಣಿ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಖಾತೆಗಳಲ್ಲಿ ನಗದು ಅಥವಾ ಠೇವಣಿ ರೂಪದಲ್ಲಿ ಪ್ರತಿನಿಧಿಸುವ ಆದಾಯವನ್ನು ಮಾತ್ರ ಘೋಷಿಸಬಹುದು ಎಂದು ಹೇಳಿದೆ.
ಆದ್ದರಿಂದ ಈ ಯೋಜನೆ ಆಭರಣ, ಸ್ಟಾಕ್, ಸ್ಥಿರ ಆಸ್ತಿ ರೂಪದಲ್ಲಿ ಪ್ರತಿನಿಧಿಸುವ ಸ್ವತುಗಳನ್ನು ಘೋಷಿಸಲು ಲಭ್ಯವಿರುವುದಿಲ್ಲ ಎಂದು ಅದು ಹೇಳಿದೆ.
ಕೇಂದ್ರ ಸರ್ಕಾರ ಕಳೆದ ವರ್ಷ ನಗದು, ಸ್ಥಿರ ಆಸ್ತಿ ಹಾಗೂ ಆಭರಣಗಳನ್ನು ಹೊಂದಿದ ದಾಖಲೆ ರಹಿತ ಸಂಪತ್ತು ಹೊಂದಿರುವವರಿಗಾಗಿ ಆದಾಯ ಘೋಷಣೆ ಯೋಜನೆ (ಐಡಿಎಸ್) ಜಾರಿಗೆ ತಂದಿತ್ತು. ಇದು ಸೆಪ್ಟೆಂಬರ್ ೩೦ರಂದು ಕೊನೆಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.