ನವದೆಹಲಿ: ಐಫೋನ್ ಮೊಬೈಲ್ ಉತ್ಪಾದಕ ಆ್ಯಪಲ್ ಇಂಕ್. ಬೆಂಗಳೂರಿನಲ್ಲಿ ತನ್ನ ಐಫೋನ್ ಉತ್ಪಾದನಾ ಘಟಕ ಸ್ಥಾಪಿಸಲು ವಿನಾಯಿತಿ ನೀಡುವಂತೆ ಇಟ್ಟಿರುವ ಕೆಲವು ಬೇಡಿಕೆಗಳನ್ನು ಭಾರತ ಪರಿಗಣಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೇರಿಕಾದ ತಂತ್ರಜ್ಞಾನ ದೈತ್ಯ ತನ್ನ ಸಿಗ್ನೇಚರ್ ಸ್ಮಾರ್ಟ್ಫೋನ್ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ಭಾರತ ಉತ್ಸುಕವಾಗಿದೆ. ಭಾರತ ಇದನ್ನು ಮುಕ್ತವಾಗಿ ಸಮಾಲೋಚಿಸಲಿದೆ. ಆ್ಯಪಲ್ ಭಾರತದಲ್ಲಿ ತನ್ನ ಘಟಕ ಸ್ಥಾಪಿಸುವ ಬಗ್ಗೆ ನಮಗೆ ಸಂತೋಷವಿದೆ ಎಂದು ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಆದರೆ ಆ್ಯಪಲ್ ಇಂಕ್.ನ ತರಿಗೆ ವಿನಾಯಿತಿ ಸೇರಿದಂತೆ ಕೆಲವು ಸುದೀರ್ಘ ನೀತಿಗಳ ಬೇಡಿಕೆಗಳ ಬಗ್ಗೆ ಕೆಲವು ಅಧಿಕಾರಿಗಳ ಪ್ರತಿರೋಧವಿದ್ದು, ಈಗಾಗಲೇ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದೇಶಿ ಕಂಪೆನಿಗಳಿಗೆ ಸೋಬಂಧಿಸಿದಂತೆ ಇದರ ಪರಿಗಣನೆಯಿಂದ ಅನ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವು ಈ ರೀತಿಯ ವಿನಾಯಿತಿಯನ್ನು ಯಾವುದೇ ಕಂಪೆನಿಗೆ ನೀಡಿಲ್ಲ. ಆ್ಯಪಲ್ ತನ್ನ ಮಾರುಕಟ್ಟೆ ಲಾಭವನ್ನು ಪಡೆಯಲು ಈ ಬೇಡಿಕೆಗಳನ್ನು ಇಟ್ಟಿದೆ. ಕೇಂದ್ರ ಸರ್ಕಾರ ಪ್ರತ್ಯೇಕ ಕಂಪೆನಿಗಳ ಬದಲು ಸಂಪೂರ್ಣ ಕೈಗಾರಿಕಾ ಕ್ಷೇತ್ರಕ್ಕೆ ನೀತಿ ರೂಪಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಧಾನಿ ಮರೇಂದ್ರ ಮೋದಿ ಅವರು ಕಳೆದ ವರ್ಷ ಮೇ ತಿಂಗಳಿನಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಅವರನ್ನು ಭೇಟಿ ಮಾಡಿ ಐಫೋನ್ ಉತ್ಪಾದನೆ ಕುರಿತು ಮಾತುಕತೆ ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.