ನವದೆಹಲಿ: ರಸ್ತೆ ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಒದಗಿಸಲು ಒಲಾ ಚಾಲಕರಿಗೆ ತರಬೇತಿ ನೀಡಲು ಒಲಾ ಮತ್ತು ಅಪೋಲ್ಲೋ ಹಾಸ್ಪಿಟಲ್ಸ್ ಪಾಲುದಾರಿಕೆ ಮಾಡಿಕೊಂಡಿದೆ.
ಚಾಲಕರು ‘ಮೈ ಅಪೊಲ್ಲೋ ಕಾರ್ಡ್’ ಆಯ್ಕೆ ಮಾಡಬಹುದಾಗಿದ್ದು, ಅವರು ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದೇ ವೇಳೆ ಅಪೊಲೋ ಮ್ಯೂನಿಚ್ ಚಾಲಕರಿಗೆ ರಿಯಾಯಿತಿ ದರಗಳಲ್ಲಿ ಅಪಘಾತ ವಿಮೆಯನ್ನು ಒದಗಿಸಲಿದೆ.
ಈ ತರಬೇತಿ ಕಾರ್ಯಕ್ರಮ 5 ನಗರಗಳಾದ ಬೆಂಗಳೂರು, ಮುಂಬಯಿ, ಚೆನ್ನೈ, ಹೈದರಾಬಾದ್, ದೆಹಲಿಗಳಲ್ಲಿ ನಡೆಯಲಿದ್ದು, ಮುಂದಿನ ತಿಂಗಳುಗಳಲ್ಲಿ ಇತರ ನಗರಗಳಿಗೆ ವಿಸ್ತರಿಸಲಾಗುವುದು.
ಒಲಾ ಚಾಲಕರಿಗಾಗಿ ವಿನ್ಯಾಸಗೊಳಿಸಿ ರೂಪಿಸಲಾಗಿರುವ ‘ಲೈಫ್ಸೇವರ್’ ತರಬೇತಿ ಕಾರ್ಯಕ್ರಮ ಒಲಾ ಚಾಲಕರಿಗೆ ವೈದ್ಯಕೀಯ ಕಿಟ್, ತುರ್ತು ಪ್ರತಿಕ್ರಿಯೆ ನೀಡುವ ಇತರ ಉಪಕರಣಗಳು ಒಳಗೊಂಡಿರುತ್ತದೆ.
ಅಪೋಲ್ಲೋದ ತುರ್ತು ಚಿಕಿತ್ಸಾ ತಜ್ಞರು ಚಾಲಕರಿಗೆ ತರಬೇತಿ ನೀಡಲಿದ್ದು, ಇದು ಹಠಾಟ್ ಎದೆ ನೋವು, ಉಸಿರಾಟದ ಸಮಸ್ಯೆ, ಆಘಾತದ ಸಂದರ್ಭ ಪ್ರಥಮ ಚಿಕಿತ್ಸೆ ಒದಗಿಸುವ ತರಬೇತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಹೃದಯಾಘಾತದ ಸಂದರ್ಭ ಸ್ಟ್ರೋಕ್ ನಿರ್ವಹಣೆ, ಸಿಪಿಆರ್ ಒದಗಿಸುವುದು, ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಮತ್ತು ಆಂಬುಲೆನ್ಸ್ ಜೊತೆ ಸಹಕರಿಸಲು ತರಬೇತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.