ನವದೆಹಲಿ: ಬಹಳ ವರ್ಷಗಳಿಂದ ಕಾಯುತ್ತಿದ್ದ ‘ದಿ ವಾಲ್ ಆಫ್ ಟ್ರುಥ್’ ದೆಹಲಿ ಸಂಸತ್ ಬಳಿಯ ಗುರುದ್ವಾರ ರಕಾಬ್ ಗಂಜ್ ಸಾಹಿಬ್ನಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
1984 ರಲ್ಲಿ ನಡೆದ ಸಿಖ್ ನರಮೇಧದ ಸ್ಮರಣೆಗಾಗಿ ಈ ಗೋಡೆಯನ್ನು ಅನಾವರಣಗೊಳಿಸಲಾಯಿತು. ಈ ಹತ್ಯಾಕಾಂಡದಲ್ಲಿ ಬಲಿಪಶುವಾದವರ ಐದು ಮಂದಿ ಪತ್ನಿಯರು (ವಿಧವಾ), ಅಕಲ್ ತಖ್ತ್ ಜತೇಂದರ್ ಗಿಯಾನಿ ಗುರುಬಚನ್ ಸಿಂಗ್, ಮಾಜಿ ರಾಯಭಾರಿ ಹಾಗೂ ಪಂಜಾಬಿ ವಿಶ್ವವಿದ್ಯಾಲಯದ ಕುಲಪತಿ ಡಾ.ಜಸ್ಪಾಲ್ ಸಿಂಗ್, ಮಾಜಿ ರಾಜ್ಯ ಸಭಾ ಸದಸ್ಯ ತ್ರಿಲೋಚನ್ ಸಿಂಗ್ ಹಾಗೂ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮನ್ಜಿತ್ ಸಿಂಗ್ ಜಿ.ಕೆ ಅವರ ಸಮ್ಮುಖದಲ್ಲಿ ಈ ನೆನಪಿನ ಗೋಡೆಯನ್ನು ಉದ್ಘಾಟಿಸಿದರು.
ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿಯು 2.25 ಕೋಟಿ ವೆಚ್ಚದಲ್ಲಿ ಈ ಗೋಡೆಯನ್ನು 2.500 sqm ವ್ಯಾಪ್ತಿಯಲ್ಲಿ ನಿರ್ಮಿಸಿದೆ. ಸಿಖ್ ದಂಗೆಯಲ್ಲಿ ಹತರಾದ ಸಾವಿರಾರು ಜನರ ಹೆಸರನ್ನು ಅಲ್ಲಿ ಕೆತ್ತಲಾಗಿದೆ. 2013 ರಲ್ಲಿ ಈ ನೆನಪಿನ ಗೋಡೆ ನಿರ್ಮಿಸುವ ಸ್ಥಳದ ಕುರಿತು ವಿವಾದವುಂಟಾಗಿತ್ತು. 2014 ರ ನವೆಂಬರ್ನಲ್ಲಿ ಈ ಗೋಡೆ ನಿರ್ಮಾಣ ಕಾರ್ಯ ಆರಂಭವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.