ನವದೆಹಲಿ: ಯಾವುದೇ ಅಗತ್ಯ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೆ ಸರ್ಜಿಕಲ್ ದಾಳಿ ನಡೆಸಲಿದೆ ಎಂದು ಭಾತೀಯ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾವತ್, ಇತ್ತೀಚೆಗೆ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಟ್ಟ ಕಡಿಮೆಯಾಗಿದೆ. ಆದರೆ ಒಂದು ವೇಳೆ ಇದು ಮುಂದುವರೆದಲ್ಲಿ ಸರ್ಜಿಕಲ್ ದಾಳಿ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಒಳನುಸುಳುವಿಕೆ ಪ್ರಯತ್ನಗಳನ್ನು ನಿಯಂತ್ರಿಸಲಾಗುತ್ತಿದ್ದು, ಬುಧವಾರ ನಿಯಂತ್ರಣ ರೇಖೆಯ ಪೂಂಛ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ರಾವತ್ ತಿಳಿಸಿದ್ದಾರೆ.
ಇದೇ ವೇಳೆ ಮತ್ತಷ್ಟು ಸರ್ಜಿಕಲ್ ದಾಳಿ ನಡೆಸುವ ಬಗ್ಗೆ ವಿಸ್ತರಿಸಿದ ಅವರು, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸರ್ಜಿಕಲ್ ದಾಳಿ ಏಕೆ ನಡೆಸಲಾಯಿತು ಎಂಬ ಅದರ ಉದ್ದೇಶವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಪಾಕಿಸ್ಥಾನ ಕಡೆಯಿಂದ ಸರಿಯಾದ ಸಂದೇಶ ಸಿಗದೇ ಇದ್ದಲ್ಲಿ, ಒಳನುಸುಳುವಿಕೆಗೆ ಉತ್ತೇಜನೆ ನೀಡಲಾಗುತ್ತಿದ್ದರೆ ಆಗ ಮತ್ತೆ ಸರ್ಜಿಕಲ್ ದಾಳಿ ನಂಭವಿಸಬಹುದು ಎಂದು ರಾವತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.