ಭೋಪಾಲ್: ಒಂದು ವಿಶಿಷ್ಟ ಯೋಜನೆಯಂತೆ ನಿರ್ಗತಿಕರ ಸಹಾಯಕ್ಕಾಗಿ ಜ.14ರಂದು ‘ಆನಂದಂ’ ಕರ್ಯಕ್ರಮ ಆಯೋಜಿಸಲು ಮಧ್ಯ ಪ್ರದೇಶ ಸರ್ಕಾರ ಮುಂದಾಗಿದೆ.
ಯಾವುದೇ ವ್ಯಕ್ತಿ ತಮ್ಮಲ್ಲಿರುವ ವವಸ್ತುಗಳನ್ನು ದಾನ ಮಾಡಲು ಬಯಸಿದಲ್ಲಿ ಆನಂದಂನಲ್ಲಿ ಇರಿಸಬಹುದು. ನಿರ್ಗತಿಕ ಜನರು ತಮ್ಮ ಅಗತ್ಯಗಳಿಗೆ ಈ ವಸ್ತುಗಳನ್ನು ಆನಂದಂ ಕೇಂದ್ರದಿಂದ ಪಡೆಯಲಿದ್ದಾರೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ನಿರ್ಗತಿಕ ಜನರಗೆ ಸಂತೋಷವನ್ನು ನೀಡುವ ಗುರಿಯೊಂದಿಗೆ ಮಧ್ಯಪ್ರದೇಶ ಸರ್ಕಾರ ಈ ಕಾರ್ಯಕ್ರಮವನ್ನು ಜ.೧೪ರ ಬೆಳಗ್ಗೆ ೧೧ ಗಂಟೆಗೆ ಆಯೋಜಿಸಲಿದೆ. ಜನರು ತಮ್ಮ ಅಗತ್ಯಕ್ಕಿಂತ ಹೆಚ್ಚಿರುವ ವಸ್ತುಗಳನ್ನು ಇಲ್ಲಿ ನೀಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.