ನವದೆಹಲಿ: ಮಹಿಳೆಯರಿಗೆ ಒಂದು ಶುಭ ಸುದ್ದಿಯಂತೆ ಶೀಘ್ರದಲ್ಲೇ ಏರ್ ಇಂಡಿಯಾ ತನ್ನ ವಿಮಾನಗಳ ಮುಂದಿನ ಸಾಲುಗಳಲ್ಲಿ ಮಹಿಳೆಯರಿಗಾಗಿ 6 ಮೀಸಲು ಸೀಟುಗಳನ್ನು ಇರಿಸಲಿದೆ. ಅದೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ.
ನಾವು ಶೀಘ್ರದಲ್ಲೇ ಏರ್ ಇಂಡಿಯಾ ವಿಮಾನಗಳ ಮುಂದಿನ ಎರಡು ಸಾಲುಗಳು (6 ಸೀಟುಗಳು) ನಹಿಳೆಯರಿಗಾಗಿ ಮೀಸಲಿಡಲಿದ್ದೇವೆ. ಮಹಿಳೆಯರಿಗಾಗಿಯೇ ಮೀಸಲಿಟ್ಟಿರುವ ಈ ಸೀಟುಗಳನ್ನು ಕಾಯ್ದಿರಿಸುವಲ್ಲಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಏರ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೋಹಾನಿ ಹೇಳಿದ್ದಾರೆ.
ರಾಷ್ಟ್ರೀಯ ವಿಮಾನಯಾನ ಮಹಿಳೆಯರಿಗಾಗಿ ಎಕಾನಮಿ ಕ್ಲಾಸ್ನ 3ನೇ ಸಾಲಿನ 6 ಸೀಟುಗಳನ್ನು ಮೀಸಲಿಡಲಿದೆ. ಇದು ಜನವರಿ 18ರಿಂದ ಜಾರಿಗೆ ಬರಲಿದೆ ಎಂದು ಏರ್ ಇಂಡಿಯಾ ಪ್ರಧಾನ ವ್ಯವಸ್ಥಾಪಕಿ (ಆದಾಯ) ಮೀನಾಕ್ಷಿ ಮಲಿಕ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.