ಗಾಂಧಿನಗರ: ಇಂಧನ, ಮೂಲಸೌಕರ್ಯ, ಆವಿಷ್ಕಾರ, ಸಂಶೋಧನೆ ಸಂಬಂಧಿತ 3 ಒಪ್ಪಂದಗಳಿಗೆ ಭಾರತ ಮತ್ತು ಕೆನಡಾ ಗುಜರಾತ್ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಸಮ್ಮೇಳದಲ್ಲಿ ಬುಧವಾರ ಸಹಿ ಹಾಕಿವೆ.
ಗುಜರಾತ್ನ ವೈಜ್ಞಾನಿಕ ವಿಶ್ವವಿದ್ಯಾಲಯ (ಜಿಎಫ್ಎಸ್ಯು)ದ ಕೈನೆಟಿಕ್ಸ್ ಇಂಟರ್ನ್ಯಾಶನಲ್ ಇಂಕ್ (ಕೆಐಐ) ಹಾಗೂ ಸೆಕ್ಯೂರಿಟಿ ಸೊಲ್ಯೂಷನ್ ಬ್ಯುಸಿನೆಸ್ ಇಂಟೀಗ್ರೇಟರ್ (ಎಸ್ಎಸ್ಬಿಐ) ನಡುವೆ ಮೊದಲ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಜಿಎಫ್ಎಸ್ಯುನಲ್ಲಿ ಪ್ರಥಮ ವಿದ್ಯುತ್ವಾಹಕ ಪರೀಕ್ಷೆ ಪ್ರಯೋಗಾಲಯ ಸ್ಥಾಪಿಸಲಾಗುವುದು.
ಇದು ಕೆಡದಾದ ಬದಲು ಭಾರತದಲ್ಲೇ ವೈಜ್ಞಾನಿಕ ಪರೀಕ್ಷೆ ಪ್ರಯೋಗಾಲಯಗಳನ್ನು ಸ್ಥಾಪಿಸುವ ಮೂಲಕ ಭಾರತದ ಇಂಧನ-ಆಧಾರಿತ ಕೃಗಾರಿಕೆಗಳ ಸಮಯ ಮತ್ತು ಹಣ ಉಳಿತಾಯ ಮಾಡಲಿದೆ. ಇದು ಗುಜರಾತ್ ವಿಶ್ವವಿದ್ಯಾಲಯದ ಹೊಸ ವೈಜ್ಞಾನಿಕ ಪರೀಕ್ಷೆ ಆಧಾರಿತ ಶಿಕ್ಷಣ ಮತ್ತು ವಿದ್ಯುತ್ ಗ್ರಿಡ್ ಸಂಬಂಧಿತ ಆರ್&ಡಿ ಕಾಮಗಾಗಿಯ ಪ್ರಯೋಗಗಳಿಗೂ ಸಹಾಯಕವಾಗಲಿದೆ.
ಅಲ್ಟ್ರಾ ಇಲೆಕ್ಟ್ರಾನಿಕ್ಸ್ ವೈಜ್ಞಾನಿಕ ತಂತ್ರಜ್ಞಾನ ಇಂಕ್. ಹಾಗೂ ಗುಜರಾತ್ ವೈಜ್ಞಾನಿಕ ವಿಶ್ವವಿದ್ಯಾಲಯದ ನಡುವೆ ಜಂಟಿ ಉಪನ್ಯಾಸ ಮತ್ತು ಸಂಶೋಧನಾ ಕಾರ್ಯಗಳಗೆ ಉಪನ್ಯಾಸಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿನಿಮಯ ಸಂಬಂಧಿತ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಶೇಖರಣಾ ವ್ಯವಸ್ಥೆಯೊಂದಿಗೆ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣದ ಪ್ರಚಾರ ಮತ್ತು ಅಭಿವೃದ್ಧಿಗಾಗಿ ಕೆನಡಾ ಕಂಪೆನಿಗಳ ಒಕ್ಕೂಟ ಹಾಗೂ ಗುಜರಾತ್ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ (ಜಿಐಡಿಬಿ) ಸಹಿ ಹಾಕಿವೆ.
ಕೆನಡಾದ ಮೂಲಸೌಕರ್ಯ ಮತ್ತು ಸಮುದಾಯಗಳ ಸಚಿವ ಅಮರಜೀತ್ ಸೋಹಿ, 8ನೇ ವೈಬ್ರಾಂಟ್ ಗುಜರಾತ್ ಸಮ್ಮೇಳನದ ಮುಂಚೂಣಿಯ ವ್ಯವಹಾರ ರಾಯಭಾರಿ ಆಗಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.