ಗುಜರಾತ್ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗಾಭ್ಯಾಸವನ್ನು ಬಿಟ್ಟು ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಲು ಹೋಗಿರುವುದಾಗಿ ಟ್ವೀಟ್ ಮಾಡಿದ್ದಾರೆ.
Skipped Yoga & went to meet mother. Before dawn had breakfast with her. Was great spending time together.
— Narendra Modi (@narendramodi) January 10, 2017
‘ಯೋಗಾಭ್ಯಾಸ ಮಾಡುವುದನ್ನು ಬಿಟ್ಟು ನನ್ನ ತಾಯಿಯನ್ನು ಭೇಟಿ ಮಾಡಲು ಹೋದೆ. ನಸುಕಿಗೂ ಮುನ್ನವೇ ಅವರೊಂದಿಗೆ ಬೆಳಗಿನ ಉಪಾಹಾರ ಸೇವಿಸಿದೆ. ಅವರೊಂದಿಗಿದ್ದ ಸಮಯ ಅದ್ಭುತವಾಗಿತ್ತು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಗುಜರಾತ್ನಲ್ಲಿ ನಡೆಯುತ್ತಿರುವ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿತ್ 2017 ರ 8 ನೇ ಆವೃತ್ತಿಯನ್ನು ಉದ್ಘಾಟಿಸಲು ನಿನ್ನೆ ಮೋದಿಯವರು ಗುಜರಾತ್ಗೆ ಆಗಮಿಸಿದ್ದರು. ಇಂದು ಬೆಳಗ್ಗಿನ ಯೋಗಾಭ್ಯಾಸ ಸಮಯದಲ್ಲಿ ಯೋಗಾಭ್ಯಾಸ ಮಾಡುವುದನ್ನು ಬಿಟ್ಟು ತಾಯಿಯನ್ನು ನೋಡಲು ಗಾಂಧಿನಗರಕ್ಕೆ ತೆರಳಿದ್ದರು.
ಮೋದಿಯವರ ತಾಯಿ ಹೀರಾಬೆನ್ 97 ವರ್ಷದವರಾಗಿದ್ದು, ಇವರು ಮೋದಿಯವರ ಕಿರಿ ಸಹೋದರ ಪಂಕಜ್ ಮೋದಿ ಅವರ ಜೊತೆ ವಾಸಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.