ಸ್ಯಾನ್ ಫ್ರಾನ್ಸಿಸ್ಕೋ: ಅಂತರ್ಜಾಲ ದೈತ್ಯ ಯಾಹೂ ತನ್ನ ಹೆಸರು ಬದಲಿಸಲಿದೆ ಎನ್ನುವ ಸುದ್ದಿಗೆ ಸೋಮವಾರ ’ಯಾಹೂ ತನ್ನ ಹೆಸರನ್ನು ಬದಲಾಯಿಸುತ್ತಿಲ್ಲ’ ಎಂದು ಪ್ರತಿಕ್ರಿಯೆ ನೀಡಿದೆ ಆದರೆ ವೇರಿಝೊನ್ ಕಂಪನಿಗೆ ಮಾರಾಟವಾಗದಿರುವ ಭಾಗ ಮಾತ್ರ ಅಲ್ಟಾಬಾ (Altaba) ಎಂದು ಮರುನಾಮಕರಣ ಮಾಡುವುದಾಗಿ ಸ್ಪಷ್ಟಪಡಿಸಿದೆ.
ಸಿಇಓ ಮರಿಸ್ಸಾ ಮೆಯರ್ ಯಾಹೂ ಮಂಡಳಿಯಿಂದ ಕೆಳಗಿಳಿಯಲಿದ್ದಾರೆ ಆದರೆ ಈಗಿರುವ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ಜುಲೈನಲ್ಲಿ ವೇರಿಝೊನ್ ಕಂಪನಿ ಯಾಹೂ ಸರ್ಚ್ ಇಂಜಿನ್ ಮತ್ತು ವೆಬ್ ಪೊರ್ಟ್ಲ್ನ್ನು 4.83 ಬಿಲಿಯನ್ ಯುಎಸ್ಡಿಗೆ ಖರೀದಿಸಲು ಒಪ್ಪಿಕೊಂಡಿತ್ತು . ಯಾಹೂವಿನ ಷೇರುದಾರರು ಕಂಪನಿಯ ಲಾಭದಾಯಕ ಹೂಡಿಕೆಯ ಮೇಲೆ ಯಾಹೂ ಜಪಾನನಲ್ಲಿ 36%ನಷ್ಟು ಪಾಲನ್ನು ಮತ್ತು ಅಲಿಬಾಬಾದಲ್ಲಿ 16%ನಷ್ಟು ಪಾಲು ಮಾತ್ರ ಹಕ್ಕು ಪತ್ರ ಬಂಡವಾಳವಾಗಿದೆ. ಆದರೆ ಹಾಗೂ ಉಳಿದ ಘಟಕದ ಯಾವುದೇ ಉತ್ಪನ್ನ ಖರೀದಿಯಾಗಿಲ್ಲ ಮತ್ತು ಈ ಘಟಕಗಳು ಸಿಬ್ಬಂದಿ ಸದಸ್ಯರನ್ನೂ ಹೊಂದಿಲ್ಲ.
ವೇರಿಝೊನ್ ಮಾಲೀಕತ್ವದ ಎಒಎಲ್ನೊಂದಿಗೆ ಒಟ್ಟುಗೂಡಿಸಿ ಯಾಹೂ ಬ್ರ್ಯಾಂಡ್ನ ವೆಬ್ ಪೋರ್ಟ್ಲ್, ಸರ್ಚ್ ಇಂಜಿನ್, ಇ-ಮೇಲ್ ಸೇವೆ ಮತ್ತು ಸುದ್ದಿ ಸೇವೆಗಳು ಮುಂದುವರಿಯುತ್ತವೆ ಎಂದು ವರದಿಯಾಗಿದೆ.
ಯಾಹೂ ಬ್ರ್ಯಾಂಡ್ನ ಯಾಹೂ ಫೈನಾನ್ಸ್ ಮತ್ತು ಯಾಹೂ ಸ್ಪೋರ್ಟ್ಸ್ ಸೇವೆಗಳು ಕಾರ್ಯನಿರ್ವಹಿಸುತ್ತವೆ ಎಂದು ಎಒಎಲ್ ವಕ್ತಾರರು ತಿಳಿಸಿದ್ದಾರೆ.
21 ವರ್ಷಗಳ ಇತಿಹಾಸವಿರುವ ಸ್ವತಂತ್ರ ಕಂಪನಿ ಯಾಹೂ ಈಗ ವೇರಿಝೊನ್ ಡೀಲ್ ಮೂಲಕ ಕೊನೆಗೊಳ್ಳಲಿದೆ. ಆದರೆ ಇದರ ಬಗ್ಗೆ ಇನ್ನೂ ನಿಖರ ಮಾಹಿತಿ ದೊರೆತಿಲ್ಲ ಹಾಗೂ ವೇರಿಝೊನ್ನಿಂದ ಅನುಮೋದನೆ ದೊರೆಯಬೇಕಿದೆ ಎಂದು ಹೇಳಲಾಗುತ್ತಿದೆ. 2017 ರ ಮೊದಲ ತ್ರೈಮಾಸಿಕದಲ್ಲಿ ಇದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.