ನವದೆಹಲಿ: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಸ್ಥಳೀಯ ಚುನಾವಣೆಯಲ್ಲಿ ಮತ್ತೊಂದು ಗೆಲುವನ್ನು ಸಾಧಿಸಿದೆ. ಫರೀದಾಬಾದ್ನ ಪುರಸಭೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 40 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ ಹಾಗೂ ಉಳಿದ 10 ಸ್ಥಾನಗಳು ಸ್ವತಂತ್ರ ಪಕ್ಷಗಳ ಪಾಲಾಗಿವೆ.
ಅನಾಣ್ಯೀಕರಣಕ್ಕೆ ಜನತೆಯ ಬೆಂಬಲ
ಪಕ್ಷದ(ಬಿಜೆಪಿಯ) ಅಭಿವೃದ್ಧಿ ಪರ ಸಿದ್ಧಾಂತ ಫರೀದಾಬಾದ್ನ ಸ್ಥಳೀಯ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಸಹಾಯವಾಗಿದೆ. ಅನಾಣ್ಯೀಕರಣದ ನಿರ್ಧಾರದ ನಂತರ ವಿವಿಧ ರಾಜ್ಯಗಳ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದಿದೆ, ಈ ಗೆಲುವು ಜನರ ಬೆಂಬಲವನ್ನು ಸೂಚಿಸುವ ಮತ್ತೊಂದು ಪುರಾವೆಯಾಗಿದೆ ಎಂದು ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್
ಈ ಐತಿಹಾಸಿಕ ಗೆಲುವು ಬಿಜೆಪಿ ಪಕ್ಷದ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಸಿದ್ಧಾಂತ ಮತ್ತು ’ಅಭಿವೃದ್ಧಿ ಪರ’ ಕಾರ್ಯಸೂಚಿಯ ಜಯವಾಗಿದೆ. ಅನಾಣ್ಯೀಕರಣ ನಂತರ ನಡೆದ ಪ್ರತಿ ಚುನಾವಣೆಯಲ್ಲಿ, ದೇಶದ ಜನತೆ ಈ ನಿರ್ಧಾರಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.
ಇತ್ತೀಚಿಗೆ ವಿವಿಧ ರಾಜ್ಯಗಳ(ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ಹಾಗೂ ಚಂದೀಗಢದ ಕೇಂದ್ರಾಡಳಿತ ಪ್ರದೇಶಗಳು) ಚುನಾವಣೆಗಳಲ್ಲಿ ತಮ್ಮ ಪಕ್ಷದ ಸಾಧನೆಯ ಬಗ್ಗೆ ವಿವರಿಸುತ್ತ, ವಿರೋಧ ಪಕ್ಷ ಅನಾಣ್ಯೀಕರದ ಮೂಲಕ ಕೇವಲ ರಾಜಕೀಯ ಮಾಡುತ್ತಿವೆ ಆದರೆ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಭಾರತವನ್ನು ಕಟ್ಟಲು ಬೆಂಬಲ ನೀಡುತ್ತಿವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಷಾ ಹೇಳಿದರು.
ಅನಾಣ್ಯೀಕರಣದ ನಂತರ ಇದು ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಯ 6ನೇ ಸತತ ಗೆಲುವಾಗಿದೆ ಎಂದು ಷಾ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.