ಕೊಲ್ಕತ್ತಾ: ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆ ಸಿಬಿಐ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಬಂಧಿಸಿದ ಬೆನ್ನಲ್ಲೇ, ಬಿಜೆಪಿ ಕಚೇರಿ ಹಾಗೂ ಕಾರ್ಯಕರ್ತರ ಮೇಲೆ ಆಕ್ರಮಣ, ಕಲ್ಲೆಸೆಯುವುದು ಆರಂಭವಾಗಿತ್ತು.
ಇದೀಗ ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೊಲ್ಕತ್ತಾದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಿಂದ ಕೇವಲ 30 ಕಿ.ಮೀ ದೂರವಿರುವ ಧುಲಘರ್ ಎಂಬ ಪುಟ್ಟ ಪಟ್ಟಣವಂತೂ ಹೊತ್ತಿ ಉರಿಯುತ್ತಿದೆ. 100 ಕ್ಕೂ ಹೆಚ್ಚು ಹಿಂದುಗಳ ಮನೆಗಳನ್ನು ಲೂಟಿ ಮಾಡಿದ್ದಲ್ಲದೇ ಬೆಂಕಿ ಹಚ್ಚಿರುವ ಕುರಿತು ವರದಿಯಾಗಿದೆ.
ಟಿಎಂಸಿ ಸಂಸದ ತಪಸ್ ಪಾಲ್ ಅವರನ್ನು ಸಿಬಿಐ ಮೊದಲು ಬಂಧಿಸಿದ ದಿನದಿಂದಲೇ ಈ ರೀತಿಯ ಕೃತ್ಯಗಳು ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರು, ಕಚೇರಿಗಳೇ ವಿಧ್ವಂಸಕರ ಗುರಿಯಾಗಿವೆ. ತಪಸ್ ಬಂಧನದ ವಿರುದ್ಧ ಟಿಎಂಸಿ ಬೆಂಬಲಿಗರು ಪ.ಬಂಗಾಲ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದರು. ನಂತರ ಕೆಲವೇ ದಿನಗಳಲ್ಲಿ ಟಿಎಂಸಿಯ ಇನ್ನೊಬ್ಬ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನೂ ಸಿಬಿಐ ಬಂಧಿಸಿತು.
ಬಂಧನಕ್ಕೆ ಪ್ರತೀಕಾರವಾಗಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ರಾಜ್ಯದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ. ಮಂಗಳವಾರ ಕೊಲ್ಕತ್ತಾದ ಸೆಂಟ್ರಲ್ ಅವೆನ್ಯೂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿ ಮೇಲೆ ದಾಳಿ, ಅಂದಿನ ದಿನ ರಾತ್ರಿ ಬಿಜೆಪಿಯ ಹಿರಿಯ ಮುಖಂಡ ಕೃಷ್ಣ ಭಟ್ಟಾಚಾರ್ಯರ ಮನೆ ಮೇಲೆ ದಾಳಿಯಾಯಿತು. ಬುಧವಾರ ಬಿಜೆಪಿಯ ಹೂಲಿ ಕಚೇರಿಯು ಟಿಎಂಸಿ ಬೆಂಕಿಗೆ ತುತ್ತಾಯಿತು. ಅಲ್ಲದೇ ಅನೇಕ ಕಡೆ ಬಿಜೆಪಿಯ ಕಾರ್ಯಕರ್ತರು ಥಳಿತಕ್ಕೊಳಗಾಗಿದ್ದೂ ಅಲ್ಲದೇ ಅನೇಕರಿಗೆ ಗಂಭೀರ ಗಾಯಗಳೂ ಆಗಿವೆ.
ಭ್ರಷ್ಟಾಚಾರದ ವಿರುದ್ಧ ಕೇಂದ್ರ ಕ್ರಮ ಕೈಗೊಳ್ಳಲು ಮುಂದಾದಾಗ, ಈ ನಡೆಯು ಖಂಡನೀಯ ಅಲ್ಲದೇ, ರಾಜ್ಯ ಸರ್ಕಾರ ಮೌನವಹಿಸಿರುವುದು ಟೀಕೆಗೆ ಗುರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.