ಲಖ್ನೌ: ಭಾರತ ಮುಂದಕ್ಕೆ ಸಾಗುವುದನ್ನು ನಾವು ಬಯಸುತ್ತೇವೆ. ಬಡತನ ನಿರ್ಮೂಲನೆ, ಅನಕ್ಷರತೆ ಕೊನೆಗೊಳಿಸುವುದು, ರೋಗಗಳ ನಿವಾರಣೆಯನ್ನು ನಾವು ಬಯಸುತ್ತೇವೆ. ಆದರೆ ಈ ಎಲ್ಲ ಕನಸುಗಳು ನನಸಾಗಬೇಕಿದ್ದಲ್ಲಿ ಉತ್ತರ ಪ್ರದೇಶದ ಅದೃಷ್ಟದ ಭಾಗ್ಯ ಬದಲಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲಖ್ನೌದಲ್ಲಿ ಪರಿವರ್ತನ್ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದ ಪ್ರಗತಿಗೆ ಉತ್ತರ ಪ್ರದೇಶ ಪ್ರಗತಿ ಹೊಂದಬೇಕಿದೆ. ಜನರು ಬಿಜೆಪಿಗೆ ಮತ ಹಾಕುವ ಮೂಲಕ ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಮತ ಹಾಕಬೇಕು. ಉತ್ತರ ಪ್ರದೇಶದಲ್ಲಿ ೧೪ ವರ್ಷಗಳ ೪ವರ್ಷಗಳ ಅಭಿವೃದ್ಧಿಯ ವನವಾಸ ಕೊನೆಗೊಳ್ಳಲಿದೆ. ಕೆಲವರು ಬಿಜೆಪಿಯ ೧೪ ವರ್ಷಗಳ ವನವಾಸ ಕೊನೆಗೊಳ್ಳಲಿದೆ ಎಂದು ಹೇಳುತ್ತಾರೆ. ಆದರೆ ಇದು ಬಿಜೆಪಿಯ ವನವಾಸದ ವಿಷಯವಲ್ಲ. ಇದು ಉತ್ತರ ಪ್ರದೇಶದ ಅಭಿವೃದ್ಧಿಯ ವನವಾಸವಾಗಿದೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡಸಿದ ಪ್ರಧಾನಿ ಮೋದಿ ಅವರು, ಉತ್ತರ ಪ್ರದೇಶದ ಜನರು ‘ಪರಿವರ್ತನೆ’ಯನ್ನು ಬಯಸುತ್ತಾರೆ ಎನ್ನುವುದು ಖಚಿತ. ಉತ್ತರ ಪ್ರದೇಶ ರಾಜ್ಯದ ಸರ್ಕಾರಗಳು ನಡೆಸುತ್ತಿರುವ ಕಾರ್ಯಗಳು ನೋವುಂಟು ಮಾಡುತ್ತಿದ್ದು, ಒಂದು ರಸ್ತೆ ನಿರ್ಮಾಣಕ್ಕೂ ಅವರು ಮೊದಲು ರಾಜಕೀಯವನ್ನು ಅಳಿಯುತ್ತಾರೆ ಎಂದು ಹೇಳಿದ್ದಾರೆ.
ಕೆಲವು ಗುಂಪುಗಳು (ಕಾಂಗ್ರೆಸ್) ತಮ್ಮ ಮಗನನಿಗೆ ಪ್ರಸ್ತಾಪಿಸಲು ಮುಂದಾದರೆ, ಬಿಎಸ್ಪಿ ತಮ್ಮ ಹಣದ ಬಗ್ಗೆ ಚಿಂತಿಸುತ್ತಿದೆ. ಮತ್ತೊಂದೆಡೆ ಎಸ್ಪಿ ತಮ್ಮ ಕುಟುಂಬದ ಸಮಸ್ಯೆ ಬಗ್ಗೆ ಚಿಂತಿತಗೊಂಡಿದೆ. ಆದರೆ ಬಿಜೆಪಿ ಪಕ್ಷ ಮಾತ್ರ ಉತ್ತರ ಪ್ರದೇಶದ ಸಹಾಯಕ್ಕೆ ಮುಂದಾಗಿದೆ ಎಂದು ಮೋದಿ ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ವಿರುದ್ಧ ದಾಳಿ ನಡೆಸಿದ ಪ್ರಧಾನಿ ಮೋದಿ, ನಮ್ಮ ರೈತರು ಶ್ರಮಪಡುತ್ತಾರೆ. ಕೇಂದ್ರ ಸರ್ಕಾರ ಪೂರ್ಣ ಬೆಂಬಲ ಇದ್ದರೂ, ಉತ್ತರ ಪ್ರದೇಶ ಸರ್ಕಾರ ರೈತರ ಬಗ್ಗೆ ಚಿಂತಿಸುತ್ತಿಲ್ಲ. ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.
‘ಅವರು (ವಿಪಕ್ಷಗಳು) ಮೋದಿ ಅವರನ್ನು ಕೇಂದ್ರದ ಆಡಳಿತದಿಂದ ತೆಗೆಯಲು ಹೇಳುತ್ತಿದ್ದಾರೆ, ನಾನು ಕಪ್ಪು ಹಣ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಹೇಳುತ್ತಿದ್ದೇನೆ. ಸರ್ಕಾರದ ಹೋರಾಟ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧವಾಗಿದೆ. ಅದು ಎಂದಿಗೂ ನಿಲ್ಲುವುದಿಲ್ಲ’ ಎಂದು ಮೋದಿ ಹೇಳಿದ್ದಾರೆ.
ಪರಿವರ್ತನ್ ರ್ಯಾಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜ್ನಾಥ್ ಸಿಂಗ್, ಕಲ್ರಾಜ್ ಮಿಶ್ರಾ, ಉಮಾ ಭಾರತಿ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.