ಭುವನೇಶ್ವರ: ಭಾರತ ಸೋಮವಾರ ಪರಮಾಣು ಸಾಮರ್ಥ್ಯದ ಅಗ್ನಿ-IV ಕ್ಷಿಪಣಿಯನ್ನು ಒಡಿಶಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವನೆಗೊಳಿಸಿದೆ.
ಅಗ್ನಿ-IV ಕ್ಷಿಪಣಿಯನ್ನು ಬಾಲಾಸೋರ್ ಕರಾವಳಿಯ ಮೊಬೈಲ್ ಲಾಂಚರ್ ಮೂಲಕ ಸುಮಾರು 11.50ಕ್ಕೆ ಉಡಾವಣೆಗೊಳಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಈ ಕ್ಷಿಪಣಿ 4000 ಕಿ.ಮೀ. ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ. 20 ಮೀ. ಉದ್ದ ಹಾಗೂ 17 ಟನ್ ಭಾರದ ಈ ಕ್ಷಿಪಣಿಯನ್ನು ಈ ಹಿಂದೆ ನವೆಂಬರ್ನಲ್ಲಿ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು.
ಭಾರತದ ‘ಮಿಸೈಲ್ ವುಮನ್’ ಟೆಸ್ಸಿ ಥಾಮಸ್ ನೇತೃತ್ವದಲ್ಲಿ ಈ ಕ್ಷಿಪಣಿ ಉಡಾವಣೆ ನಡೆಸಲಾಗಿದೆ.
ಇದು ಕ್ಷಿಪಣಿಯ ೬ನೇ ಪರೀಕ್ಷಾರ್ಥ ಉಡಾವಣೆಯಾಗಿದೆ.
ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ವಿನ್ಯಾಸಗೊಳಿಸಿದೆ.
ಭಾರತ ಈಗಾಗಲೇ ಅಗ್ನಿ ಸಿರೀಸ್, ಪೃಥ್ವಿ ಸಿರೀಸ್ ಹಾಗೂ ಜಲಾಂತರ್ಗಾಮಿ ಮಿಸೈಲ್ಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.