ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನೀಷೇಧವನ್ನು ಬೆಂಬಲ ಸೂಚಿಸಲು ಇಲ್ಲಿಯ ಬಟ್ಟೆ ಅಂಗಡಿ ವ್ಯಾಪಾರಸ್ಥರೊಬ್ಬರು 1 ರೂ. ಗೆ ಒಂದರಂತೆ ಸೀರೆ ಮಾರಾಟ ಮಾಡುತ್ತಿದ್ದಾರೆ.
ಬೀದರ್ನ ಸೃಷ್ಟಿ-ದೃಷ್ಟಿ ಸಾರಿ ಸೆಂಟರ್ನ ಮಾಲೀಕ ಚಂದ್ರಶೇಖರ್ ಅವರು ಗುಜರಾತ್ನ ಸೂರತ್ನಿಂದ ಬಕ್ರೀದ್ ಹಾಗೂ ಕ್ರಿಸ್ಮಸ್ ಪ್ರಯುಕ್ತ ಮಾರಾಟ ಮಾಡಲು 1 ಲಕ್ಷ ರೂ. ಮೌಲ್ಯದಲ್ಲಿ ಸೀರೆ ಖರೀದಿಸಿದ್ದರು. ಆದರೆ ಅನಾಣ್ಯೀಕರಣದ ಪ್ರಭಾವದಿಂದಾಗಿ ಸೀರೆಗಳ ಮಾರಾಟವಾಗಲಿಲ್ಲ. ಹೀಗಾಗಿ ಚಂದ್ರಶೇಖರ್ ಅವರು ಅನಾಣ್ಯೀಕರಣಕ್ಕೆ ಬೆಂಬಲ ಸೂಚಿಸಿ ಸೀರೆಗಳನ್ನು ರೂ. 1 ರಂತೆ ಸೀರೆ ಮಾರುತ್ತಿದ್ದಾರೆ. ಆದರೆ 1 ರೂ. ನಾಣ್ಯದ ಬದಲು 1 ರೂ. ನೋಟನ್ನೇ ಪಾವತಿಸುವ ಷರತ್ತಿನ ಮೇರೆಗೆ ಸೀರೆ ಮಾರುತ್ತಿದ್ದಾರೆ.
ಅನಾಣ್ಯೀಕರಣ ನೋಟುಗಳಿಗಳಿಗೆ ಸಂಬಂಧಿಸಿದೆ. ಆದ್ದರಿಂದ 1 ರೂ. ನೋಟುಗಳನ್ನೇ ಸ್ವೀಕರಿಸುತ್ತಿರುವುದಾಗಿ ಹೇಳಿದ ಚಂದ್ರಶೇಖರ್, ಪ್ರಧಾನಿ ಮೋದಿ ಅವರ ನೋಟು ನಿಷೇಧವನ್ನು ಬೆಂಬಲ ಸೂಚಿಸಲು ಈ ರೀತಿ ವ್ಯಾಪಾರ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.