ನವದೆಹಲಿ : ಕಾರು ಪಾರ್ಕಿಂಗ್ಗೆ ಮನೆಯಲ್ಲಿ ಜಾಗವಿದೆ ಎಂದು ಪ್ರಮಾಣ ಪತ್ರ ನೀಡಿದರೆ ಮಾತ್ರ ಕಾರು ಖರೀದಿಸಬಹುದು. ಇಂತಹದೊಂದು ನಿಯಮವನ್ನು ಶೀಘ್ರದಲ್ಲೇ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ.
ಮನೆಯಲ್ಲಿ ಕಾರು ನಿಲ್ಲಿಸಲು ಜಾಗವಿಲ್ಲದಿದ್ದರೂ ಕಾರನ್ನು ಖರೀದಿಸಿ ಅದನ್ನು ರಸ್ತೆ, ಫುಟ್ಪಾತ್ಗಳ ಮೇಲೆ ನಿಲ್ಲಿಸುವುದು, ಮನ ಬಂದಂತೆ ಎಲ್ಲಿ ಬೇಕಾದರೂ ಅಲ್ಲಿ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವುದು ದೇಶದಾದ್ಯಂತ ಇರುವ ಸಮಸ್ಯೆ. ಈ ಸಮಸ್ಯೆಗೆ ಪರಿಹಾರವೆಂಬಂತೆ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.
ಕಾರು ಪಾರ್ಕಿಂಗ್ ಮಾಡಲು ಜಾಗವಿದೆ ಎಂಬ ಪ್ರಮಾಣಪತ್ರವನ್ನು ಸ್ಥಳೀಯ ಸಂಸ್ಥೆಗಳಿಗೆ ಪ್ರಸ್ತುತಪಡಿಸಿದರೆ ಮಾತ್ರ ಹೊಸ ಕಾರುಗಳನ್ನು ಖರೀದಿಸಬಹುದು. ವಾಹನ ದಟ್ಟಣೆ ವಾಹನ ದಟ್ಟಣೆ ನಿಯಂತ್ರಣ ಕುರಿತು ಚಿಂತನೆ ನಡೆಸಲಾಗುತ್ತಿದೆ. ಕಡ್ಡಾಯವಾಗಿ ಪ್ರಮಾಣ ಪತ್ರದ ಕ್ರಮವನ್ನು ಪರಿಶೀಲಿಸಲಾಗುವುದು. ನಂತರವಷ್ಟೇ ಅನುಮತಿ ನೀಡಲಾಗುವುದು. ಈ ನಿಯಮದ ಜಾರಿಗೆ ಈಗಾಗಲೆ ನಗರಾಭಿವೃದ್ಧಿ ಸಚಿವಾಲಯ ಮತ್ತು ಭೂಸಾರಿಗೆ ಸಚಿವಾಲಯಗಳು ಮಾತುಕಡೆ ನಡೆಸುತ್ತಿವೆ. ನಾನೂ ಕೂಡಾ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಶೀಘ್ರದಲ್ಲೇ ಈ ನಿಯಮವನ್ನು ಜಾರಿಗೆ ತರಲು ಚಿಂತಿಸಲಾಗುತ್ತಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ’ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.