ನವದೆಹಲಿ: ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕೈಗಾರಿಕಾ ಸಂಸ್ಥೆಗಳು, ಉದ್ಯಮಿಗಳು ಚೆಕ್ ಅಥವಾ ಇಲೆಟ್ರಾನಿಕ್ ವಿಧಾನವನ್ನು ಬಳಸಿ ನಗದು ರಹಿತ ವೇತನ ಪಾವತಿ ಮಾಡಲು ವೇತನ ಪಾವತಿ ಕಾಯಿದೆ ತಿದ್ದುಪಡಿಗೆ ಬುಧವಾರ ಸುಗ್ರೀವಾಜ್ಞೆ ನೀಡಿದೆ.
ಕೇಂದ್ರ ಸರ್ಕಾರದ ಈ ಸುಗ್ರೀವಾಜ್ಞೆಗೆ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ರಾಷ್ಟ್ರಪತಿಗಳ ಅಂಗೀಕಾರಕ್ಕೆ ರವಾನಿಸಲಾಗಿದೆ. ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆಗೆ 6 ತಿಂಗಳ ಒಳಗಾಗಿ ಸಂಸತ್ನಲ್ಲಿ ಅನುಮೋದನೆ ಪಡೆಯಬೇಕಿದೆ.
ಆದಾಗ್ಯೂ ಮಾಲೀಕರು ಉದ್ಯೋಗಿಗಳಿಗೆ ನಗದು ಮೂಲಕ ವೇತನ ಪಾವತಿಸುವ ಆಯ್ಕೆಯನ್ನೂ ನೀಡಲಾಗಿದೆ.
ವೇತನ ಪಾವತಿ (ತಿದ್ದುಪಡಿ) ಮಸೂದೆ, 2016ರ ಪ್ರಧಾನ ಕಾಯಿದೆಯ ವಿಭಾಗ 6 ತಿದ್ದುಪಡಿ ಮೂಲಕ ಮಾಲೀಕರು ತಮ್ಮ ಉದ್ಯೋಗಿಗಳಿಗೆ ಚೆಕ್ ಅಥವಾ ವಿದ್ಯುನ್ಮಾನ ಆಧಾರದಲ್ಲಿ ಅವರ ಖಾತೆಗೆ ವೇತನ ವರ್ಗಾಯಿಸುವ ತಿದ್ದುಪಡಿಯನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದೆ.
ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಈ ಮಸೂದೆಯನ್ನು ಪರಿಚಿಯಿಸಿದ್ದಾರೆ.
ಈ ಮಸೂದೆ ರಾಜ್ಯ ಸರ್ಕಾರಗಳಿಗೆ ನಗದು ರಹಿತ ವೇತನ ಪಾವತಿಯನ್ನು ಅನುಸರಿಸುವ ಕೈಗಾರಿಗಳು ಮತ್ತು ಸಂಸ್ಥೆಗಳನ್ನು ಸೂಚಿಸಲು ಅನುಮತಿಸುತ್ತದೆ.
ಇದು ನಗದು ರಹಿತ ಅಥವಾ ಡಿಜಿಟಲ್ ಆರ್ಥಿಕತೆಯ ಉದ್ದೇಶವನ್ನು ನಿರ್ವಹಿಸುತ್ತದೆ ಎಂದು ಮಸೂದೆಯಲ್ಲಿ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.