ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು ಮತ್ತು ಅನುಸ್ಥಾಪಿತ ಕಚೇರಿಗಳ ಮೇಲೆ ಫಿದಾಯೀನ್ (ಅತ್ಮಹತ್ಯಾ ದಾಳಿಕೋರರು) ಪಡೆಗಳ ಭಯೋತ್ಪಾದಕ ದಾಳಿಯ ವಿರುದ್ಧ ಹೋರಾಡಲು ಜಮ್ಮು ಮತ್ತು ಕಾಶ್ಮೀರ ರಾಜ್ಯ ಪೊಲೀಸ್ನ 200 ಮಂದಿಯ ತಂಡಕ್ಕೆ ವಿಶೇಷ ಕಮಾಂಡೋ ತರಬೇತಿ ನೀಡಲಾಗಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲಾಥ್ಪೋರಾದಲ್ಲಿರುವ ಕಮಾಂಡೋ ತರಬೇತಿ ಕೇಂದ್ರ (ಸಿಟಿಸಿ)ದಲ್ಲಿ ವಿವಿಧ ಸಂಸ್ಥೆಗಳು ಮತ್ತು ಪೊಲೀಸ್ ಅಧಿಕಾರಿಗಳು 200 ಕಮಾಂಡೋಗಳಿಗೆ ತರಬೇತಿ ನೀಡಿ ಪರೇಡ್ ನಡೆಸುವ ಮೂಲಕ ಸೇವೆಗೆ ನಿಯೋಜಿಸಿದ್ದಾರೆ. ಪರೇಡ್ನಲ್ಲಿ ಜಮ್ಮು ಮತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಕಮಾಂಡೋಗಳು ಜಮ್ಮು-ಕಾಶ್ಮೀರ ಪೊಲೀಸ್ನ ಫಿದಾಯೀನ್-ವಿರೀಧಿ ತಂಡದ ಭಾಗವಾಗಿದ್ದು, ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ) ಬ್ರ್ಯಾಂಡ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಲಾಥ್ಪೋರಾದ ಸಿಟಿಸಿ ಪ್ರಮುಖ ಎಸ್ ಎಸ್ ಪಿ ಮೊಹಮ್ಮದ್ ಚೌಧರಿ ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ 2000 ಕಮಾಂಡೋಳಿಗೆ ತರಬೇತಿ ನೀಡಲಾಗಿದೆ. ಅವರಿಗೆ ಫಿದಾಯಾನ್ ಆಕ್ರಮಿತ ಕಟ್ಟಡಗಳನ್ನು ತೆರವುಗೊಳಿಸುದು, ಕಡಿದಾದ ಪರ್ವತ ಏರಿವುದು, ನದಿಗಳನ್ನು ಈಕಲು ತರಬೇತಿ ನೀಡಲಾಗುತ್ತಿದೆ. ಅಪರಾಧ ಕಾರ್ಯಾಚರಣ ವೇಳೆ ವೈಕ್ಞಾನಿಕ ನೆರವು ನೀಡುವುದು, ಗುಪ್ತಚರ ಮಾಹಿತಿ ಪಡೆಯುವುದು ಮತ್ತಿತರ ತರಬೇತಿಯನ್ನೂ ನೀಡಲಾಗುತ್ತದೆ ಎಂದು ಚೌಧರಿ ಹೇಳೀದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.