ತಿರುವನಂತಪುರಂ: ಕೇರಳದಲ್ಲಿ ಸೌರಶಕ್ತಿ ಚಾಲಿತ ದೋಣಿ ಸೇವೆಯು ಜನವರಿ 12 ರಿಂದ ಪ್ರಾರಂಭಗೊಳ್ಳಲಿದೆ. ಇದರೊಂದಿಗೆ ಕೇರಳ ಸರ್ಕಾರ ತನ್ನ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಆರಂಭಿಸಲಿದೆ.
ಸೌರಶಕ್ತಿ ಚಾಲಿತ ದೋಣಿಯು ಜನವರಿ 12 ರಂದು ವೈಕೋಮ್ನಿಂದ ಕೊಚ್ಚಿಗೆ ತನ್ನ ಮೊದಲ ಪ್ರಯಾಣವನ್ನು ಬೆಳೆಸಲಿದೆ. 75 ಮಂದಿ ಪ್ರಯಾಣಿಕರು ಮೊದಲ ಹಂತದಲ್ಲಿ ಪ್ರಯಾಣಿಸಲಿದ್ದಾರೆ.
ಪೆಟ್ರೋಲ್, ಡೀಸೆಲ್ ಬದಲಿಗೆ ಬೇರೆ ಇಂಧನ ಮೂಲಗಳನ್ನು ಬಳಸಿಕೊಳ್ಳುವಂತಾಗಬೇಕು ಮತ್ತು ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಈ ಕ್ರಮವು ರಾಜ್ಯ ಸರ್ಕಾರದ ಯೋಜನೆಯ ಒಂದು ಅಂಗವಾಗಿದೆ. ಇದೇ ಚಿಂತನೆಯಲ್ಲಿ ಸೌರಶಕ್ತಿ ಚಾಲಿತ ದೋಣಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸಿಎನ್ಜಿ ಮತ್ತು ಎಲ್ಎನ್ಜಿ ವಾಹನಗಳ ಸೇವೆಗೂ ಮುಂದಿನ ದಿನಗಳಲ್ಲಿ ಗಮನ ಹರಿಸಲಾಗುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಎ. ಕೆ. ಶಶೀಂದ್ರನ್ ಹೇಳಿದ್ದಾರೆ.
ಕೇರಳ ಸರ್ಕಾರ ಮೊದಲ ಬಾರಿ 2013 ರಲ್ಲಿ ಇಂಧನ ಚಾಲಿತ ದೋಣಿಗಳ ಬದಲು ಸೌರಶಕ್ತಿ ಚಾಲಿತ ದೋಣಿಗಳಿಗೆ ಯೋಜನೆ ರೂಪಿಸಿತ್ತು. ನವ್ಆಲ್ಟ್ ಸೋಲಾರ್ ಎಂಡ್ ಇಲೆಕ್ಟ್ರಿಕ್ ಬೋಟ್ಸ್ ವಿನ್ಯಾಸಗೊಳಿಸಿ ನಿರ್ಮಿಸಿದ ಸೌರಶಕ್ತಿ ಚಾಲಿತ ದೋಣಿಯನ್ನು ವ್ಆಲ್ಟ್ನ ಕೊಚ್ಚಿ ಹಡಗುತಾಣದಲ್ಲಿ ನಿರ್ಮಿಸಲಾಗಿದೆ. ನವ್ಆಲ್ಟ್, ಫ್ರೆಂಚ್ ಕಂಪೆನಿ ಆಲ್ಟೆನ್ ಹಾಗೂ ಭಾರತೀಯ ಕಂಪೆನಿ ನವ್ಗತಿ ಜಂಟಿ ಸಹಯೋಗದಲ್ಲಿ ಇದರ ಗುತ್ತಿಗೆಯನ್ನು ಪಡೆದಿತ್ತು.
75 ಆಸಗಳ 20 ಮೀಟರ್ ಉದ್ದದ ಈ ದೋಣಿಗೆ 2 ಎಲೆಕ್ಟ್ರಿಕ್ ಮೋಟಾರ್ಗಳನ್ನು ಅಳವಡಿಸಲಾಗಿದೆ. 20 ಕಿಲೋವ್ಯಾಟ್ ಸೌರ ಘಟಕ ಲೀಥಿಯಂ ಬ್ಯಾಟರಿ ಚಾರ್ಜ್ ಮಾಡಲು ಸಹಕರಿಸುತ್ತದೆ. ಸೌರಶಕ್ತಿ ಹಾಗೂ ವಿದ್ಯುತ್ಶಕ್ತಿ ಎರಡರಿಂದಲೂ ಚಲಿಸುವ ಈ ದೋಣಿ ಶಬ್ದ ರಹಿತ, ಕಂಪನರಹಿತ ಮತ್ತು ಮಾಲಿನ್ಯರಹಿತವಾಹಿದೆ.
ಈ ಮೂಲಕ ಕೊಚ್ಚಿ ಶೀಘ್ರದಲ್ಲೇ ಭಾರತದ ಪ್ರಪ್ರಥಮ ಸೌರಶಕ್ತಿ ಚಾಲಿತ ದೋಣಿಗಳಿಗೆ ಮನೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.