ಲಖ್ನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೇವಲ ನಾಲ್ಕು ತಾಸುಗಳಲ್ಲಿ ಐಟಿ ನಗರ, ಕ್ಯಾನ್ಸರ್ ಆಸ್ಪತ್ರೆ, ಒಲಿಂಪಿಕ್ ಮಾದರಿಯ ಈಜು ಕೊಳ ಸೇರದಂತೆ ರೂ. 50 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ 300 ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಈ 300 ಯೋಜನೆಗಳಲ್ಲಿ ಸದ್ಯ 100 ಎಕರೆ ಪ್ರದೇಶದಲ್ಲಿ ಐಟಿ ನಗರ, 983 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕ್ಯಾನ್ಸರ್ ಆಸ್ಪತ್ರೆ ಹಾಗೂ 850 ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಕೇಂದ್ರಗಳಿಗೆ ಹಸಿರು ನಿಶಾನೆ ನೀಡಿದ್ದಾರೆ. ಉಳಿದ ಯೋಜನೆಗಳು ಕಾಗದ ರೂಪದಲ್ಲೇ ಉಳಿದುಕೊಂಡಿವೆ.
ಉತ್ತರ ಪ್ರದೇಶದಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ದಿನಾಂಕಗಳು ನಿಗದಿಯಾದ ಬಳಿಕ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ಹಲವು ಯೋಜನೆಗಳನ್ನು ಆರಂಭಿಸಲು ಅಖಿಲೇಶ್ ಯಾದವ್ ಉದ್ದೇಶಿಸಿದ್ದು, ಕೆಲವೇ ಕೆಲವು ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ.
ಕಳೆದ ತಿಂಗಳು ಅಖಿಲೇಶ್ ಯಾದವ್ ಅವರು ಲಖ್ನೌ-ಆಗ್ರಾ ನಡುವೆ 10,000 ಕೋಟಿ ರೂ. ವೆಚ್ಚದ ಎಕ್ಸ್ಪ್ರೆಸ್ವೇ ಉದ್ಘಾಟಿಸಿದ್ದು, ಇದು ಸಾರ್ವಜನಿಕರಿಗಾಗಿ ಇನ್ನಷ್ಟೇ ತೆರವುಗೊಳಿಸಬೇಕಿದೆ. ಅಲ್ಲದೇ ಲಖ್ನೌ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರಕ್ಕೆ ಹಸಿರು ನಿಶಾನೆ ನೀಡಿದ್ದು, ಸಾರ್ವಕನಿಕರಿಗಾಗಿ ಇನ್ನಷ್ಟೇ ಸಂಚಾರ ಆರಂಭಗೊಳ್ಳಬೇಕಿದೆ.
‘ಕಾಮ್ ಬೋಲ್ತಾ ಹೈ’ (ನನ್ನ ಕೆಲಸ ಹೇಳುತ್ತದೆ) ಎಂಬ ಪದನುಡಿಗಳೊಂದಿಗೆ ಅಖಿಲೇಶ್ ಯಾದವ್ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಉತ್ತರ ಪ್ರದೇಶದಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.