ನವದೆಹಲಿ: ದೇಶಾದ್ಯಂತ ಸ್ವಸಹಾಯ ಸಂಘಗಳು ಒದಗಿಸುತ್ತಿರುವ ಕರಕುಶಲ ವಸ್ತುಗಳು, ಪೌಷ್ಠಿಕ ಆಹಾರ, ಪ್ರವಾಸ ಸ್ಥಳಗಳು, ಮನೆಗೆಲಸಕ್ಕೆ ನೌಕರರು ಮುಂತಾದ ಸೇವೆಗಳ ಮಾರುಕಟ್ಟೆಗೆ ಐಆರ್ಸಿಟಿಸಿ ಇ-ಕ್ಯಾಟರಿಂಗ್ ವೇದಿಕೆಯನ್ನು ಬಳಸುವ ಅಗತ್ಯತೆಗೆ ರೈಲ್ವೆ ಸಚಿವ ಸುರೇಶ್ ಪ್ರಭು ಒತ್ತು ನೀಡಿದ್ದಾರೆ.
ರೈಲ್ವೆ ಮಂಡಳಿಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಇಂತಹ ಸೇವೆಗಳನ್ನು ಒದಗಿಸುತ್ತಿರುವ ಸ್ವಸಹಾಯ ಸಂಘಗಳನ್ನು ನಿರ್ದೇಶಿಸಲು ನಾಬಾರ್ಡ್ ನೋಡಲ್ ಸಂಸ್ಥೆಯಾಗಬೇಕು. ಇತರ ಸಂಸ್ಥಗಳು ಮತ್ತು ಸಚಿವಾಲಯಗಳು ಕೂಡ ಇಂತಹ ಸೇವೆಗಳನ್ನು ಒದಗಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ.
‘ಹುನರ್ ಸೆ ರೋಜಗಾರ್ ಯೋಜನಾ’ ಮೂಲಕ ಕ್ಯಾಟರಿಂಗ್ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಸಮಾಜದ ಹಿಂದುಳಿದ ವರ್ಗಗಳ ಸುಮಾರು 1000 ಮಂದಿಗೆ ಪ್ರತಿ ವರ್ಷ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಪ್ರವಾಸೋದ್ಯಮ ಸಚಿವಾಲಯ ನಿಧಿ ಒದಗಿಸುತ್ತಿದೆ ಎಂದು ಐಆರ್ಸಿಟಿಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮನೋಚಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.