ಬೆಂಗಳೂರು : ದೂರ ಕ್ರಮಿಸಲಿರುವ ಬಸ್ಗಳಲ್ಲಿ ಪರಿಸರ ಸ್ನೇಹಿ ಜೈವಿಕ ಶೌಚಾಲಯಗಳನ್ನು ಅಳವಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ಯೋಜಿಸಿದೆ. ತ್ಯಾಜ್ಯವನ್ನು ಗೊಬ್ಬರಕ್ಕೆ ಪರಿವರ್ತನೆಗೊಳಿಸಿ ಮಾರಾಟ ಮಾಡುವ ಉದ್ದೇಶ ಹೊಂದಿದೆ.
ದೂರ ಕ್ರಮಿಸುವ 1000 ಕ್ಕೂ ಹೆಚ್ಚು ಬಸ್ಗಳನ್ನು ಕೆ.ಎಸ್.ಆರ್.ಟಿ.ಸಿ. ಹೊಂದಿದ್ದು, ಅವುಗಳಲ್ಲಿ ಕೇವಲ 5 ಬಸ್ಗಳಲ್ಲಿ ಸಾಮಾನ್ಯ (ಸಾಂಪ್ರದಾಯಿಕ/ದೇಶಿ) ಶೌಚಾಲಯವನ್ನು ಅಳವಡಿಸಲಾಗಿದೆ. ಆದರೆ ಇಂಥ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆ ಕಷ್ಟದಾಯಕ ಎಂಬುದು ಸಂಸ್ಥೆಯ ಅಧಿಕಾರಿಗಳ ಅಭಿಪ್ರಾಯ.
ಜೈವಿಕ ಶೌಚಾಲಯಗಳ ಅಳವಡಿಕೆಯಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಸೂಕ್ಷ್ಮಜೀವಿಗಳ ಸಹಾಯದಿಂದ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕಟಾರಿಯಾ, ಪದೇ ಪದೇ ಮೂತ್ರವಿಸರ್ಜಿಸುವ ಮಧುಮೇಹದಿಂದ ಬಳಲುವವರಿಗೂ ಇದು ಅನುಕೂಲಕರವಾಗಿದೆ. ಅಲ್ಲದೇ ಅಲ್ಲಲ್ಲಿ ಬಸ್ಸನ್ನು ನಿಲ್ಲಿಸುವ ಸಂದರ್ಭವೂ ಬರದೇ ಸಮಯದ ಉಳಿತಾಯವೂ ಆಗುತ್ತದೆ ಎಂದಿದ್ದಾರೆ.
ಈ ರೀತಿಯ ಶೌಚಾಲಯಗಳ ಕುರಿತು ರೈಲ್ವೆ ಅಧಿಕಾರಿಗಳನ್ನು ಭೇಟಿಯಾಗಿ ಅವುಗಳ ಕಾರ್ಯನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಪ್ರಯಾಣಿಕರ ಸಮಸ್ಯೆಗಳನ್ನು ಕಡಿತಗೊಳಿಸುವಲ್ಲಿ ಸಹಾಯವಾಗುವ ಇ-ವ್ಯಾಲೆಟ್ಸ್ ಮತ್ತು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರವನ್ನು ಪರಿಚಯಿಸಲೂ ಆಲೋಚಿಸಿದೆ. ಹಣ ಪಾವತಿ ಮಾಡಲು, ಟಿಕೆಟ್ ಕಾಯ್ದಿರಿಸಲು ಹಾಗೂ ಆನ್ಲೈನ್ ಮೂಲಕ ಟಿಕೆಟ್ ರದ್ದು ಮಾಡಿದಾಗ ಮರುಪಾವತಿ ಮಾಡುವಲ್ಲಿಯೂ ಇವು ಹೆಚ್ಚು ಸಹಕಾರಿಯಾಗಲಿವೆ ಎಂದು ತಿಳಿಸಿದ್ದಾರೆ.
ಜೈವಿಕ ಶೌಚಾಲಯಗಳ ಅಳವಡಿಕೆಯಿಂದ ಆರ್ಥಿಕ ಹೊರೆಯಾದರೂ, ಬಸ್ ದರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.