ನವದೆಹಲಿ : ದೂರದರ್ಶನದಲ್ಲಿ ಇತಿಹಾಸ ನಿರ್ಮಿಸಿದ್ದ ಟೆಲಿವಿಷನ್ ಸರಣಿ ‘ಮಹಾಭಾರತ’ ಡಿಸೆಂಬರ್ 19 ರಿಂದ ರೇಡಿಯೋದಲ್ಲಿ ಪ್ರಸಾರಗೊಳ್ಳಲಿದೆ.
ಆಲ್ ಇಂಡಿಯಾ ರೇಡಿಯೋ ಈ ಕುರಿತು ಟ್ವೀಟ್ ಮಾಡಿದೆ.
MAHABHARATA now on the radio!
TUNE IN from 19th December
@ 11.30 AM -12 Noon pic.twitter.com/6YEKOlPlVo— ALL INDIA RADIO (@AkashvaniAIR) December 13, 2016
ಬಿ. ಆರ್. ಛೋಪ್ರಾ ನಿರ್ಮಿಸಿದ್ದ ಖ್ಯಾತ ಟೆಲಿವಿಷನ್ ಸರಣಿ ‘ಮಹಾಭಾರತ’ವು ದೂರದರ್ಶನ ಕ್ಷೇತ್ರದಲ್ಲಿ ಇತಿಹಾಸವನ್ನೇ ನಿರ್ಮಿಸಿತ್ತು. ಈ ಖ್ಯಾತ ಟೆಲಿವಿಷನ್ ಸರಣಿ ಮಹಾಭಾರತವನ್ನು ಡಿಸೆಂಬರ್ 19 ರಿಂದ ಆಲ್ ಇಂಡಿಯಾ ರೇಡಿಯೋ (ಎಐಆರ್)ದಲ್ಲಿ ಪ್ರಸಾರಗೊಳ್ಳಲಿದೆ. ಡಿಸೆಂಬರ್ 19 ರಿಂದ ಬೆಳಗ್ಗೆ 11.30 ರಿಂದ 12 ಗಂಟೆಯವರೆಗೆ ಪ್ರಸಾರಗೊಳ್ಳಲಿರುವ ‘ಮಹಾಭಾರತ’ ಸರಣಿಯು 2017 ರ ಜೂನ್ 30 ರಂದು ಮುಕ್ತಾಯಗೊಳ್ಳಲಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಹಿಂದಿ ವಲಯದ ಪ್ರಾಥಮಿಕ ವಾಹಿನಿಗಳಲ್ಲಿ ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈಯ ಎಫ್ಎಂ ಗೋಲ್ಡ್ ಸ್ಟೇಷನ್ಗಳಲ್ಲಿ ಮಹಾಭಾರತವನ್ನು ಆಲಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.