ಕಠ್ಮಂಡು: ಭೀಕರ ಭೂಕಂಪಕ್ಕೆ ತುತ್ತಾಗಿ ನೆಲಕ್ಕಪ್ಪಳಿಸಿ ಬಿದ್ದಿರುವ ಕಟ್ಟಡದ ಅವಶೇಷಗಳೊಳಗೆ ಜನರು ಜೀವಂತವಾಗಿರುವ ಸಾಧ್ಯತೆ ಇನ್ನಿಲ್ಲ ಎಂದು ನೇಪಾಳ ಸರ್ಕಾರ ಸ್ಪಷ್ಟಪಡಿಸಿದೆ. 7.9 ತೀವ್ರತೆಯ ಭೂಕಂಪನ ನೇಪಾಳವನ್ನು ಅಪ್ಪಳಿಸಿ ಇಂದಿಗೆ ಒಂದು ವಾರವಾಗಿದೆ.
ಸುಮಾರು 20ಕ್ಕೂ ಅಧಿಕ ದೇಶಗಳ ಸ್ನಿಫರ್ ನಾಯಿ ಮತ್ತು ಇತರ ಪರಿಕರಗಳನ್ನು ಬಳಸಿ ಅವಶೇಷಗಳಡಿ ಜನ ಜೀವಂತವಾಗಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ. ಆದರೆ ಗುರುವಾರ ಸಂಜೆಯಿಂದ ಯಾವುದೇ ಜೀವಂತ ವ್ಯಕ್ತಿಗಳು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಸಂಭವಿಸಿದ ಈ ಭೂಕಂಪಕ್ಕೆ ಒಟ್ಟು 6,600 ಮಂದಿ ಬಲಿಯಾಗಿದ್ದಾರೆ, ಅಲ್ಲದೇ ಏಷ್ಯಾಖಂಡದ ಅತಿ ಬಡ ರಾಷ್ಟ್ರದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಇನ್ನು ಅವಶೇಷಗಳಡಿ ಜನ ಜೀವಂತವಾಗಿರುತ್ತಾರೆ ಎಂಬ ಆಸೆಯನ್ನೂ ಕೈಬಿಡಲಾಗಿದೆ, ಹೀಗಾಗೀ ಬದುಕುಳಿದ ಜನರಿಗೆ ತ್ವರಿತ ಪರಿಹಾರ ಕಾರ್ಯವನ್ನು ಒದಗಿಸುವತ್ತ ಗಮನವನ್ನು ಕೇಂದ್ರೀಕರಿಸಲಾಗುತ್ತಿದೆ.
ಇನ್ನೊಂದೆಡೆ ಹಾನಿಗೀಡಾಗಿರುವ ಪ್ರದೇಶದಲ್ಲಿ ವಾಸಿಸುತ್ತಿರುವ 1.7 ಮಿಲಿಯನ್ ಜನರಿಗೆ ರೋಗ ರುಜಿನಗಳು ಬರುವ ಸಾಧ್ಯತೆಗಳು ಇವೆ ಎಂದು ವಿಶ್ವಸಂಸ್ಥೆಯ ಯುನಿಸೆಫ್ ಎಚ್ಚರಿಕೆಯನ್ನು ನೀಡಿದೆ. ಮಕ್ಕಳನ್ನು ಆ ಪ್ರದೇಶದಿಂದ ಶಿಫ್ಟ್ ಮಾಡಿ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.