ಇಸ್ಲಾಮಾಬಾದ್ : 7 ಪಾಕಿಸ್ಥಾನ ಸೈನಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದ್ದಕ್ಕಾಗಿ ಪಾಕಿಸ್ಥಾನವು ಭಾರತದ ಹೈ ಕಮಿಷನರ್ ಗೌತಮ್ ಬಾಂಬಾವಲೆ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ.
ಜಮ್ಮು-ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ನಿನ್ನೆ 7 ಪಾಕಿಸ್ಥಾನ ಸೈನಿಕರನ್ನು ಹತ್ಯೆ ಮಾಡಿತ್ತು. ಇದರಿಂದ ಕುಪಿತವಾದ ಪಾಕಿಸ್ಥಾನವು ಭಾರತದ ಹೈ ಕಮಿಷನರ್ ಗೌತಮ್ ಬಾಂಬಾವಲೆ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಭಾರತೀಯ ಸೇನೆಯು ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಇದರ ಪರಿಣಾಮ 7 ಪಾಕಿಸ್ಥಾನ ಸೈನಿಕರು ಸಾವನ್ನಪ್ಪಿದ್ದಾರೆ. ಇದನ್ನು ಪಾಕಿಸ್ಥಾನವು ತೀವ್ರವಾಗಿ ಖಂಡಿಸುತ್ತದೆ. ಕಳೆದೆರಡು ತಿಂಗಳಿನಿಂದ ಗಡಿಯಲ್ಲಿ ಭಾರತೀಯ ಸೇನೆಯು ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಭಾರತವು ಯುದ್ಧಾಕಾಂಕ್ಷೆಯುಳ್ಳದ್ದಾಗಿದೆ. ಈ ವರ್ತನೆಯನ್ನು ಪಾಕಿಸ್ಥಾನವು ತೀವ್ರವಾಗಿ ಖಂಡಿಸುತ್ತದೆ.
ಗಡಿಯಲ್ಲಿ ಭಾರತೀಯ ಸೇನೆಯ ವರ್ತನೆಯನ್ನು ನಿಯಂತ್ರಿಸಿ, ಪಾಕಿಸ್ಥಾನವು ನಿಯಮ ಮತ್ತು ಒಪ್ಪಂದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದೆ. ಪಾಕ್ ಎಂದಿಗೂ ಕದನ ವಿರಾಮ ಉಲ್ಲಂಘನೆ ಮಾಡಿಲ್ಲ. ಗುಂಡಿನ ದಾಳಿ ನಡೆದಾಗ ಮಾತ್ರ ಪ್ರತಿಯಾಗಿ ದಾಳಿ ಮಾಡಿದೆ. ಇದನ್ನು ಪಾಕಿಸ್ಥಾನದ ದೌರ್ಬಲ್ಯ ಎಂದು ತಿಳಿದುಕೊಳ್ಳಬಾರದು ಎಂದು ಹೇಳುವ ಮೂಲಕ ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿ ಇಜಾಜ್ ಅಹ್ಮದ್ ಚೌಧರಿ ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪಾಕಿಸ್ಥಾನದ 7 ಸೈನಿಕರ ಹತ್ಯೆಗೆ ಪ್ರತೀಕಾರ ತೀರಿಸಲು ನಮ್ಮ ದೇಶವು ಸಂಪೂರ್ಣ ಸಾಮರ್ಥ್ಯ ಹೊಂದಿದೆ. ಭಾರತದ ಗಡಿ ಠಾಣೆಗಳ ಮೇಲೆ ಪರಿಣಾಮಕಾರಿ ದಾಳಿ ನಡೆಸುತ್ತೇವೆ. ಕಾಶ್ಮೀರದಲ್ಲಿ ಉದ್ಭವಿಸಿರುವ ಮಾನವ ಹಕ್ಕು ಬಿಕ್ಕಟ್ಟು ವಿಚಾರದಲ್ಲಿ ವಿಶ್ವದ ಗಮನ ಬೇರೆಡೆಗೆ ಸೆಳೆಯಲು ಭಾರತ ಇಂತಹ ಕೃತ್ಯಗಳನ್ನು ನಡೆಸುತ್ತಿದೆ. ಆದರೆ ನಾವು ನಮ್ಮ ನೆಲದ ರಕ್ಷಣೆಗಾಗಿ ಸಂಪೂರ್ಣ ಶಕ್ತರಿದ್ದೇವೆ ಎಂದು ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.