ಗೋವಾ: ಭಯೋತ್ಪಾದನೆಯು ದೆಹಲಿ ಮತ್ತು ಕಾಬುಲ್ಗಳಿಗೆ ಭಾರೀ ಬೆದರಿಕೆಯಾಗಿದ್ದು, ಈ ಪ್ರದೇಶದಲ್ಲಿ ದೀರ್ಘ ಕಾಲದ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಭಯೋತ್ಪಾದನೆಯ ಸಮಸ್ಯೆಯನ್ನು ನಿಗ್ರಹಿಸುವುದು ಅಗತ್ಯ ಎಂದು ಅಫ್ಘಾನಿಸ್ಥಾನದ ಭಾರತೀಯ ರಾಯಭಾರಿ ಶಾಯಿದಾ ಮೊಹಮ್ಮದ್ ಅಬ್ದಾಲಿ ಹೇಳಿದ್ದಾರೆ.
ಭಯೋತ್ಪಾನೆ ನಮ್ಮ ಶತ್ರುವಾಗಿದೆ ಮತ್ತು ಯಾವುದೇ ಬೆಂಬಲಿಗರಿಲ್ಲದೇ ಅದು ಅಸ್ತಿತ್ವದಲ್ಲಿ ಇರಲು ಸಾಧ್ಯವಿಲ್ಲ. ನಮ್ಮಲ್ಲಿ ಭಯೋತ್ಪಾದನೆಯ ಬೆಂಬಲಿಗರಿದ್ದಾರೆ. ಅವರು ರಾಜಕೀಯ ಮತ್ತಿತರ ಉದ್ದೇಶಗಳಿಗೆ ನಮ್ಮ ಜನರನ್ನು ತಮ್ಮ ಸಾಧವನ್ನಾಗಿ ಬಳಸುತ್ತಿದ್ದಾರೆ ಎಂದು ಅಬ್ದಾಲಿ ಹೇಳಿದ್ದಾರೆ.
ಭಯೋತ್ಪಾದನೆ ಅಫ್ಘಾನಿಸ್ಥಾನಕ್ಕೆ ದೊಡ್ಡ ಸವಾಲಾಗಿದೆ. ಅದು ದೇಶದ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ. ಇದು ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ದೊಡ್ಡ ಬೆದರಿಕೆಯಾಗಿದ್ದು, ಎಲ್ಲರೂ ಇದರ ವಿರುದ್ಧ ಹೋರಾಡಲು ಕೈಜೋಡಿಸಬೇಕು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.