ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 8ನೇ ಬ್ರಿಕ್ಸ್ ಶೃಂಗಸಭೆಗೆ ಗೋವಾ ರಾಜ್ಯಕ್ಕೆ ಆಗಮಿಸಲಿದ್ದು, ಈ ಸಂದರ್ಭ ಭಾರತ ಹಾಗೂ ರಷ್ಯಾ 5 ಮಿಲಿಯನ್ ಡಾಲರ್ ಎಸ್-400 ಸರ್ಪೇಸ್- ಟು-ಏರ್ ಮಿಸೈಲ್ ಒಪ್ಪಂದಕ್ಕೆ ಸಹಿ ಹಾಕಲಿವೆ.
ಗೋವಾದಲ್ಲಿ ನಡೆಯುವ ಸಮ್ಮೇಳನದ ವೇಳೆ ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲಿದ್ದು, ಈ ವೇಳೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಕ್ರೆಮ್ಲಿನ್ ಸಹಾಯಕ ಯೂರಿ ಉಶಕೋವ ಹೇಳಿದ್ದಾರೆ.
ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತ, ಚೀನಾ, ರಷ್ಯಾ, ಬ್ರೆಸಿಲ್, ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಪಾಲ್ಗೊಳ್ಳಲಿವೆ.
ಭಾರತದ ರಕ್ಷಣಾ ಸಚಿವಾಲಯ ಕಳೆದ ಡಿಸೆಂಬರ್ನಲ್ಲಿ ಎಸ್-400 ವಿಮಾನ-ನಿರೋಧಕ ಕ್ಷಿಪಣಿ ಖರೀದಿಯನ್ನು ಖಚಿತಪಡಿಸಿತ್ತು.
ಭಾರತ ಪಡೆಯಲಿರುವ 5 ಕ್ಷಿಪಣಿಗಳು ಪ್ರಮುಖ ಸರ್ಕಾರಿ ಕೇಂದ್ರಗಳು ಸೇರಿದಂತೆ ಹೆಚ್ಚಿನ ಮೌಲ್ಯದ ಪರಮಾಣು ಸ್ಥಾವರಗಳ ಅನುಸ್ಥಾಪನೆಗಳಿಗೆ ರಕ್ಷಣೆ ಒದಗಿಸಲಿದೆ. ಪಾಕಿಸ್ಥಾನ ಮತ್ತು ಚೀನಾದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಗಳ ವಿರುದ್ಧ ರಕ್ಷಣೆಗೆ ಮಿಸೈಲ್-ಶೀಲ್ಡ್ ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.