ನವದೆಹಲಿ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿರುವ ಸೀಮಿತ ದಾಳಿ ಇದೀಗ ರಾಜಕೀಯ ದಾಳಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಭಾರತದಲ್ಲೇ ಇದ್ದು ಪಾಕ್ ಪರ ವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಈ ವಿಷಯ ಕುರಿತಂತೆ ಎರಡು ಗಂಪುಗಳಾಗಿವೆ. ಭಾರತದ ಗುಂಪಿನಲ್ಲಿ ಭಾರತೀಯ ಸೇನೆಯವರು, ಅಪಾರ ದೇಶಭಕ್ತರು ಇದ್ದರೆ, ಪಾಕ್ ಗುಂಪಿನಲ್ಲಿ ಭಯೋತ್ಪಾದಕರು, ಪಾಕ್ ಸೇನೆ ಜೊತೆಗೆ ಭಾರತದಲ್ಲೇ ಇರುವ ಕೆಲ ಪತ್ರಕರ್ತರು, ರಾಜಕೀಯ ನೇತಾರರು ಇದ್ದಾರೆ. ಭಾರತದಲ್ಲೇ ಇದ್ದುಕೊಂಡು ಪಾಕ್ ಪರ ಮಾತಿನ ಸೀಮಿತ ದಾಳಿ ನಡೆಸುತ್ತಿದ್ದಾರೆ.
ನಿನ್ನೆಯವರೆಗೆ ಪಾಕ್ ಪರ ಇರುವ ಗುಂಪಿನಲ್ಲಿ ಕೇಜ್ರಿವಾಲ್, ದಿಗ್ವಿಜಯ್ ಸಿಂಗ್, ಸಂಜಯ್ ನಿರುಪಮ್, ಪಿ. ಚಿದಂಬರಂ ಮತ್ತಿನ್ನಿತರ ಪತ್ರಕರ್ತರು ಇದ್ದರು. ಆದರೆ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಸೇಪರ್ಡೆಯಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಿಸಾನ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸೈನಿಕರ ರಕ್ತದ ಹಿಂದೆ ಅಡಗಿ ಕುಳಿತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಮ್ಮ ಸೈನಿಕರು ತಮ್ಮ ರಕ್ತ ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಸೀಮಿತ ದಾಳಿ ನಡೆಸಿರುವ ನಮ್ಮ ಸೈನಿಕರು ರಕ್ತ ನೀಡಿದ್ದಾರೆ. ಸೀಮಿತ ದಾಳಿ ನಡೆಸಿದ ಭಾರತೀಯ ಯೋಧರ ರಕ್ತದೊಂದಿಗೆ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ. ನೀವು ನಮ್ಮ ಸೈನಿಕರ ರಕ್ತದ ಹಿಂದೆ ಅಡಗಿ ಕುಳಿತಿದ್ದೀರಿ. ಇದು ನಿಜಕ್ಕೂ ಸರಿಯಲ್ಲ, ಭಾರತೀಯ ಸೇನೆ ಭಾರತಕ್ಕಾಗಿ ತನ್ನ ಕೆಲಸ ಮಾಡಿದೆ. ನೀವು ನಿಮ್ಮ ಕೆಲಸ ಮಾಡಿ, ನೀವು ಭಾರತದ ರೈತರ ಕೆಲಸ ಮಾಡಿ, ಇದು ನಿಮ್ಮ ಕೆಲಸ. 7ನೇ ವೇತನ ಆಯೋಗದಡಿಯಲ್ಲಿ ಸೈನಿಕರ ವೇತನವನ್ನು ಹೆಚ್ಚಳ ಮಾಡಿ, ಇದಕ್ಕಾಗಿ ಭಾರತ ನಿಮ್ಮನ್ನು ಪ್ರಧಾನಿಯನ್ನಾಗಿ ಆರಿಸಿದೆ. ಇದು ವಾಸ್ತವಾಂಶ ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಯವರ ಮೇಲೆ ಮಾತಿನ ದಾಳಿ ನಡೆಸುವ ಭರದಲ್ಲಿ ಭಾರತೀಯ ಸೇನೆಯ ಮೇಲೆ ಅವರು ಮಾಡಿರುವ ಆಪಾದನೆ ನಿಜಕ್ಕೂ ಯಾವ ರಾಜಕೀಯ ನೇತಾರನಿಗೂ ಶೋಭೆ ತರುವುದಿಲ್ಲ. ಇದು ರಾಹುಲ್ ಗಾಂಧಿ ತನ್ನ ಮೇಲೆ ತಾನು ಮಾತಿನ ಸೀಮಿತ ದಾಳಿ ನಡೆಸಿದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.