ನವದೆಹಲಿ : ನವೆಂಬರ್ 9 ಮತ್ತು 10 ರಂದು ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳದಿರುವಂತೆ ಭಾರತ ನಿರ್ಧರಿಸಿದೆ. ಭಾರತದ ನಿಲುವು ಬೆಂಬಲಿಸಿ ಬಾಂಗ್ಲಾದೇಶ, ಭೂತಾನ್, ಆಪ್ಘಾನಿಸ್ಥಾನ ಕೂಡಾ ಸಾರ್ಕ್ ಶೃಂಗ ಬಹಿರಷ್ಕರಿಸಿದೆ. ಈ ಹಿನ್ನಲೆಯಲ್ಲಿ ಸಾರ್ಕ್ ಶೃಂಗ ಸಭೆ ರದ್ದುಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಉರಿ ಉಗ್ರ ದಾಳಿ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಸೃಷ್ಟಿಯಾಗಿರುವ ಸನ್ನಿವೇಶದಿಂದಾಗಿ ಇಸ್ಲಾಮಾಬಾದ್ನಲ್ಲಿ ನವೆಂಬರ್ 9 ಮತ್ತು 10 ರಂದು ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಭಾರತ ಪಾಲ್ಗೊಳ್ಳುವುದನ್ನು ಬಹಿಷ್ಕರಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವವರಿದ್ದರು, ಆದರೆ ಇದೀಗ ಅವರ ಸಾರ್ಕ್ ಶೃಂಗ ಸಭೆಗೆ ಗೈರಾಗಲಿದ್ದಾರೆ.
ಭಯೋತ್ಪಾದನೆಯ ನೆರಳಿನಲ್ಲಿ ಸಾರ್ಕ್ ಶೃಂಗ ಸಭೆ ನಡೆಸಲು ಸಾಧ್ಯವಿಲ್ಲ. ಪಾಕಿಸ್ಥಾನವು ಸಾರ್ಕ್ ಸಭೆಯನ್ನು ಯೋಗ್ಯ ರೀತಿಯಲ್ಲಿ ನಡೆಸುವ ಪರಿಸರವನ್ನು ಹೊಂದಿಲ್ಲ. ಹೀಗಾಗಿ ಭಾರತ ಸರ್ಕಾರದ ವತಿಯಿಂದ ಯಾರೊಬ್ಬರೂ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಾರತ ಹೇಳಿದೆ.
ಆದರೆ ಪಾಕಿಸ್ಥಾನ ಭಾರತದ ಈ ನಿಲುವನ್ನು ದುರಾದೃಷ್ಟಕರ ಎಂದು ಬಣ್ಣಿಸಿದೆ.
ಸಾರ್ಕ್ ಶೃಂಗ ಸಭೆಯಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ, ನೇಪಾಳ, ಆಪ್ಘಾನಿಸ್ಥಾನ, ಮಾಲ್ಡೀವ್ಸ್, ಶ್ರೀಲಂಕಾ ಸದಸ್ಯ ರಾಷ್ಟ್ರಗಳಾಗಿವೆ. ಯಾವುದೇ ಒಂದು ದೇಶದ ಮುಖ್ಯಸ್ಥರು ಶೃಂಗ ಸಭೆಗೆ ಬರದಿದ್ದರೂ ಸಭೆಯನ್ನು ರದ್ದುಗೊಳಿಸುವ ನಿಯಮವನ್ನು ಸಾರ್ಕ್ ಹೊಂದಿದೆ. ಹೀಗಾಗಿ ಈ ಬಾರಿಯ ಸಾರ್ಕ್ ಶೃಂಗ ಸಭೆ ರದ್ದುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.