ಇಸ್ಲಾಮಾಬಾದ್ : ದೆಹಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲು ಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಆಲಿಷಾನ್ ಪಾಕಿಸ್ಥಾನ್ ಎಗ್ಸಿಬಿಷನ್ನನ್ನು ರದ್ದು ಮಾಡಲಾಗಿದೆ ಎಂದು ಪಾಕಿಸ್ಥಾನದ ವಾಣಿಜ್ಯ ಅಭಿವೃದ್ಧಿ ನಿಗಮ (ಟಿಡಿಎಪಿ) ಹೇಳಿಕೆ ಹೊರಡಿಸಿದೆ.
ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ಥಾನ ಉಗ್ರರು ದಾಳಿ ನಡೆಸಿದ ಪರಿಣಾಮದಿಂದಾಗಿ ಭಾರತದೊಂದಿಗಿನ ಗಡಿ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿಯು ನಿಯಂತ್ರಣಕ್ಕೆ ಮೀರಿರುವ ವಿಷಯವಾಗಿರುವುದೆ. ಆದ್ದರಿಂದ ಪಾಕಿಸ್ಥಾನವು ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ನಡೆಸಲು ಯೋಜಿಸಿದ್ದ ಆಲಿಷಾನ್ ಪಾಕಿಸ್ಥಾನ್ ಎಗ್ಸಿಬಿಷನ್ ವಾಣಿಜ್ಯ ವಸ್ತುಪ್ರದರ್ಶನವನ್ನು ರದ್ದು ಪಡಿಸಲಾಗಿದೆ ಎಂದು ಪಾಕಿಸ್ಥಾನದ ವಾಣಿಜ್ಯ ಅಭಿವೃದ್ಧಿ ನಿಗಮ (ಟಿಡಿಎಪಿ) ಹೇಳಿದೆ.
ಈ ಹಿಂದೆ 2012 ಮತ್ತು 2014 ರಲ್ಲಿ ಪಾಕಿಸ್ಥಾನಿ ಲೈಫ್ ಸ್ಟೈಲ್ ಪರಿಚಯಿಸುವ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ರೀತಿಯ ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದವು. ಇವು ಭಾರತದಲ್ಲಿ ಭಾರೀ ಯಶಸ್ಸನ್ನು ಕಂಡಿದ್ದವು.
ಆದರೆ ಇದೀಗ ಉರಿ ದಾಳಿ ಹಿನ್ನಲೆಯಲ್ಲಿ ಈ ಬಾರಿಯ ವಸ್ತು ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.